ಅಭಿಮಾನಿಗಳಿಗೆ ಫ್ರೀಯಾಗಿ ಮಾಲ್ಡೀವ್ಸ್ ದರ್ಶನ ಮಾಡಿಸುತ್ತಿದ್ದಾರೆ ಸನ್ನಿ ಲಿಯೋನ್ ! ಬೆಂಗಳೂರು, ಸೆಪ್ಟೆಂಬರ್ 02, 2021 (..):ಸನ್ನಿ ಲಿಯೋನ್ ಸದ್ಯ ಸಂಸಾರದೊಂದಿಗೆ ಮಾಲ್ಡೀವ್ಸ್​ ನಲ್ಲಿ ಕಾಲಕಳೆಯುತ್ತಿದ್ದಾರೆ. ವಿಶೇಷ ಎಂದರೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಅವರು ಸಾಕಷ್ಟು ಫೋಟೋ, ವೀಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಲ್ಡೀವ್ಸ್​ ದರ್ಶನ ಮಾಡಿಸುತ್ತಿದ್ದಾರೆ. ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು ಮಾಲ್ಡೀವ್ಸ್​ಗೆ ತೆರಳಿ, ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ ಸನ್ನಿ. ಅಲ್ಲಿ ಕಳೆಯುತ್ತಿರುವ ಸುಂದರ ಸಮಯವನ್ನು ಹಾಗೂ ನಿಸರ್ಗ ಸೌಂದರ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ.