ಮೈಸೂರಿನಲ್ಲಿ ದರೋಡೆ, ಶೂಟೌಟ್ ಗೆ ಬಳಸಿದ್ದ ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು. ಮೈಸೂರು,ಸೆಪ್ಟಂಬರ್,1,2021(..):ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಶೂಟೌಟ್ ಗೆ ಬಳಸಿದ್ದ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೂರದ ಬಾಂಬೆ ಸಿಟಿಯಲ್ಲಿ ಆರೋಪಿ ಮನೆ ಪಕ್ಕದ ಮೋರಿಯಲ್ಲಿ ಪಿಸ್ತೂಲ್ ಸಿಕ್ಕದ್ದು ಇದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗಸ್ಟ್ 23 ರ ಸಂಜೆ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ನಲ್ಲಿ ದರೋಡೆ ನಡೆಸಲಾಗಿತ್ತು. ವೃತ್ತಿ‌ ವೈಷಮ್ಯದಿಂದ ದರೋಡೆಗೆ ಸುಪಾರಿ ನೀಡಲಾಗಿತ್ತು. ದರೋಡೆ ವೇಳೆ ಅಮಾಯಕ ವ್ಯಕ್ತಿಯ ಮೇಲೆ ಆರೋಪಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿ ವ್ಯಕ್ತಿಯನ್ನ ಕೊಂದಿದ್ದರು. ಪ್ರಕರಣದಲ್ಲಿ ಒಟ್ಟು 8 ಆರೋಪಿಗಳ ಪೈಕಿ 7 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಸದ್ಯ ಹೆಚ್ಚಿ‌ನ ವಿಚಾರಣೆಗಾಗಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. : – - - –