ಸೆ.7 ರಂದು ಮೈಸೂರು ವಿಶ್ವವಿದ್ಯಾನಿಲಯದ 101ನೇ ವಾರ್ಷಿಕ ಘಟಕೋತ್ಸವ ಮೈಸೂರು,ಆಗಸ್ಟ್,30,2021(..) ಮೈಸೂರು ವಿಶ್ವವಿದ್ಯಾನಿಲಯದ 101ನೇ ವಾರ್ಷಿಕ ಘಟಕೋತ್ಸವವನ್ನು ದಿನಾಂಕ: 07.09.2021ರ ಮ೦ಗಳವಾರ ಬೆಳಿಗ್ಗೆ 10.30 ಘಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್‌ ಭವನದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯದ ರಾಜ್ಯಪಾಲರು ಕುಲಾಧಿಪತಿಗಳು ಥಾವರ್ ಚಂದ್ ಗೆಹೋಟ್ ಅವರು, ಮೈಸೂರು ವಿಶ್ವವಿದ್ಯಾನಿಲಯದ ಘಟಕೋತ್ಸವದ ಅಧ್ಯಕ್ಷತೆ ವಹಿಸುವರು. ಪ್ರೊ.ಶೇಖರ್ ಸಿ. ಮಂಡೆ, ಕಾರ್ಯದರ್ಶಿಗಳು, ಮಹಾನಿರ್ದೇಶಕರು, ಸಿಎಸ್‌ಐಆ‌, ನವದೆಹಲಿ ಇವರು ಘಟಕೋತ್ಸವ ಭಾಷಣವನ್ನು ಮಾಡುವರು. ಹಾಗೂ ಡಾ. ಸಿ.ಎನ್. ಅಶ್ವಥ್ ನಾರಾಯಣ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿಗಳು ಘಟಕೋತ್ಸವದಲ್ಲಿ ಉಪಸ್ಥಿತರಿರುವರು. : 101st - -7th