6 ರಿಂದ 8ನೇ ತರಗತಿ ಆರಂಭದ ಬಗ್ಗೆ ಮಾತುಕತೆ ನಡಸಿದ್ದೇವೆ- ಸಚಿವ ಡಾ.ಕೆ.ಸುಧಾಕರ್. ಬೆಂಗಳೂರು,ಆಗಸ್ಟ್,30,2021(..):ರಾಜ್ಯದಲ್ಲಿ 6 ರಿಂದ 8ನೇ ತರಗತಿ ಆರಂಭದ ಬಗ್ಗೆ ಮಾತುಕತೆ ನಡೆಸಿದ್ದೇವೆ. ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. 6 ರಿಂದ 8ನೇ ತರಗತಿ ಶಾಲೆಗಳ ಆರಂಭ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಈಗಾಗಲೇ 9 ರಿಂದ 12ನೇ ತರಗತಿವರೆಗೆ ಶಾಲೆ ಕಾಲೇಜು ಆರಂಭಿಸಿದ್ದೇವೆ. ಶಾಲಾ ಕಾಲೇಜು ಆರಂಭದಿಂದ ಕೊರೋನಾ ಹೆಚ್ಚಳವಾಗಿಲ್ಲ. ಹೀಗಾಗಿ 6 ರಿಂದ 8ನೇ ತರಗತಿ ಆರಂಭ ಕುರಿತು ಇಂದು ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದರು. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಕೆಲವೇ ಕ್ಷಣಗಳಲ್ಲಿ ಶಾಲೆ ಆರಂಭ ಹಾಗೂ ಗಣೇಶೋತ್ಸವ ಆಚರಣೆ ಸಂಬಂಧ ನಿರ್ಧಾರವಾಗಲಿದೆ. : - - -6th 8th –- . . .