ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣ: ಸುಪಾರಿ ನೀಡಿದ್ದ ಆಭರಣದಂಗಡಿ ಮಾಲೀಕನ ಬಂಧನ. ಮೈಸೂರು,ಆಗಸ್ಟ್,31,2021(..):ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ನೀಡಿದ್ಧ ಆರೋಪದಡಿ ಮಹದೇವಪುರದ ಬಾಲಾಜಿ ಬ್ಯಾಂಕರ್ಸ್‌ ಮಾಲೀಕ ಮಹೇಂದ್ರ ಎಂಬುವವರನ್ನ ಬಂಧಿಸಲಾಗಿದೆ. ಇತ್ತೀಚೆಗೆ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ನಲ್ಲಿ ಕಳ್ಳತನವಾಗಿತ್ತು. ಈ ವೇಳೆ ದರೋಡೆಕೋರರ ಗುಂಡಿಗೆ ಅಮಾಯಕ ವ್ಯಕ್ತಿ ಬಲಿಯಾಗಿದ್ದರು. ಮಹೇಂದ್ರ ವೃತ್ತಿ‌ ವೈಷಮ್ಯದಿಂದ ದರೋಡೆಗೆ ಸುಪಾರಿಗೆ ನೀಡಿದ್ದನು ಎನ್ನಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಹೆಚ್ಚಿ‌ನ ವಿಚಾರಣೆಗಾಗಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. : - - – - – –