ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ. ಮೈಸೂರು,ಆಗಸ್ಟ್,30,2021(..):ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ ಬಸ್ ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಹುಣಸೂರು ತಾಲ್ಲೂಕಿನ ಕಲ್ ಬೆಟ್ಟ ಬಳಿ ಈ ಘಟನೆ ನಡೆದಿದೆ. ಮಹದೇವ ಗಂಭೀರ ಗಾಯಗೊಂಡ ಬಸ್ ಚಾಲಕ. ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹುಣಸೂರು ಬಸ್ ಡಿಪೋಗೆ ಸೇರಿದ ಬಸ್ ಡಿಕ್ಕಿಯಾಗಿದೆ. ಕುಶಾಲನಗರದಿಂದ ಬೆಳಗಳೂರಿಗೆ ಬಸ್ ತೆರಳುತ್ತಿತ್ತು ಎನ್ನಲಾಗಿದ್ದು ಚಾಲಕ ಮಹದೇವಗೆ ಗಂಭೀರ ಗಾಯವಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. : –- - - -