ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಸಿಎಫ್ ಐ ಪ್ರತಿಭಟನೆ: 50ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ. ಮಂಗಳೂರು,ಆಗಸ್ಟ್,30,2021(..):ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಮಂಗಳೂರಿನ ಕೊಣಾಜೆ ವಿವಿಯಲ್ಲಿ ಸಿಪಿಎಫ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಸಿಎಫ್ ಐ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇಂದು ಕೊಣಾಜೆ ವಿವಿ ಕ್ಯಾಂಪಸ್ ನಲ್ಲಿ ಸಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಪೊಲೀಸರು ಸಿಎಫ್ ಐ ನ 50ಕ್ಕೂ ಹೆಚ್ಚು ಕಾರ್ಯಕರ್ತರನ್ನ ಬಂಧಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಧ್ಯಯುಗದ ಇತಿಹಾಸ ತೆಗೆಯಲಾಗಿದೆ. ಪ್ರಾಚೀನ ಮತ್ತು ಇಂದಿನ ಇತಿಹಾಸವನ್ನ ಮಾತ್ರ ಬೋಧಿಸಲಾಗುತ್ತಿದೆ. ಪ್ರಾಚೀನ ಇತಿಹಾಸದಲ್ಲಿ ಮೌಢ್ಯತೆ ತುಂಬಿದೆ. ಇದನ್ನ ಮಕ್ಕಳಿಗೆ ಕಲಿಸಲು ಆಗಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. : - –- - - - 50 .