ನಾಯಂಡಹಳ್ಳಿ-ಕೆಂಗೇರಿ ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ಬೆಂಗಳೂರು, ಆಗಸ್ಟ್, 29, 2021 (..): ನಮ್ಮ ಮೆಟ್ರೊ 2ನೇ ಹಂತದ ಮೈಸೂರು ರಸ್ತೆಯ ನಾಯಂಡಹಳ್ಳಿ-ಕೆಂಗೇರಿ ವಿಸ್ತರಿತ ಮಾರ್ಗಕ್ಕೆ ಇಂದು ಹಸಿರು ನಿಶಾನೆ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ.ಮೀ ಮೆಟ್ರೋ ನೇರಳೆ ಮಾರ್ಗ ಇದಾಗಿದೆ. ಉದ್ಘಾಟನೆ ನೆರವೇರಿದ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮಾತ್ರ ಸಂಪೂರ್ಣ ಮಾಯವಾಗಿತ್ತು, ಬಿಎಂಆರ್ ಸಿಎಲ್ ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿ ಬರೆದಿತ್ತು.