ಮೈಸೂರಿನಲ್ಲಿ ಸಾರಥಿ ವೋಕ್ ಮಲ್ಟಿ ಬ್ರ್ಯಾಂಡ್ ದ್ವಿಚಕ್ರ ವಾಹನಗಳ ಸೇವಾ ಕೇಂದ್ರ ಉದ್ಘಾಟನೆ ದ್ವಿಚಕ್ರ ವಾಹನಗಳ ಸರ್ವೀಸ್, ರಿಪೇರಿ ಸೇವೆ ಒಂದೇ ಸೂರಿನಡಿ ಲಭ್ಯ ಮೈಸೂರು:ಅರಮನೆ ನಗರಿ ಮೈಸೂರಿನಲ್ಲಿ ಇನ್ನು ಮುಂದೆ ಎಲ್ಲಾ ದ್ವಿಚಕ್ರ ವಾಹನಗಳ ಸರ್ವೀಸ್ ರಿಪೇರಿ ಸೇವೆ ಒಂದೇ ಸೂರಿನಡಿಯಲ್ಲಿ ಸಿಗಲಿದೆ. ಮಾನಂದವಾಡಿ ರಸ್ತೆ ಶ್ರೀರಾಂಪುರದಲ್ಲಿ ( ಬೆಇಎಂಎಲ್ ನಗರ ) ನೂತನವಾಗಿ ಸಾರಥಿ ವೋಕ್ ಮಲ್ಟಿ ಬ್ರ್ಯಾಂಡ್ ದ್ವಿಚಕ್ರ ವಾಹನಗಳ ಸೇವಾ ಕೇಂದ್ರ ಇಂದು ಆಗಸ್ಟ್ 27 ರಂದು ಲೋಕಾರ್ಪಣೆಗೊಂಡಿದೆ. ಸಚಿನ್‌ ಕುಮಾರ್ ಮಾಲೀಕತ್ವದಲ್ಲಿ ಈ ಕೇಂದ್ರ ಆರಂಭವಾಗಿದ್ದು ಒಂದೇ ಸೂರಿನಡಿಯಲ್ಲಿ ದ್ವಿಚಕ್ರ ವಾಹನದ ಬಿಡಿ ಭಾಗಗಳು, ವಾಹನ ಇನ್ಸುರೆನ್ಸ್, ಹೆಲ್ಮೆಟ್, ಬ್ಯಾಟರಿ, ಟೈರ್, ಇಂಜಿನ್ ಆಯಿಲ್ ಸೇರಿದಂತೆ ದ್ವಿಚಕ್ರ ವಾಹನದ ಎಲ್ಲಾ ಸೇವೆಗಳು ಲಭ್ಯವಿದೆ. ಗ್ರಾಹಕರು ಇದರ ಉಪಯೋಗ ಪಡೆಯಬಹುದಾಗಿದೆ.