ಮಹಿಳೆಯರ ಶೋಷಣೆ ಕುರಿತ ಇನ್’ಸ್ಟಾಗ್ರಾಂನಲ್ಲಿ ನಟಿ ರಮ್ಯಾ ಪೋಸ್ಟ್ ವೈರಲ್ ಬೆಂಗಳೂರು, ಆಗಸ್ಟ್ 27, 2021 (..):ಶೋಷಣೆ ನಡೆದಾಗ ಮಹಿಳೆಯರದ್ದೇ ತಪ್ಪು ಎಂಬಂತೆ ವಾದ ಮಂಡಿಸುವವರಿಗೆ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಈ ಕುರಿತು ಸುದೀರ್ಘವಾಗಿ ಬರೆದು ಪೋಸ್ಟ್​ ಮಾಡಿದ್ದಾರೆ. ರಮ್ಯಾ ಮಾಡಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​ ವೈರಲ್​ ಆಗುತ್ತಿದೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ನೋಡಿಕೊಂಡು ಸುಮ್ಮನಿರಬೇಡಿ. ಧ್ವನಿ ಎತ್ತಿ’ ಎಂದು ರಮ್ಯಾ ಕರೆ ನೀಡಿದ್ದಾರೆ. ಶೋಷಣೆ ನಡೆದಾಗಲೆಲ್ಲ ಮಹಿಳೆಯರು ಸಡಿಲ ಆಗಿರುವಂತಹ ಬಟ್ಟೆ ಧರಿಸಬಾರದಿತ್ತು, ತುಂಬ ರಾತ್ರಿ ಸಮಯದಲ್ಲಿ ಹೊರಗೆ ಹೋಗಬಾರದಿತ್ತು, ಮೇಕಪ್​ ಹಾಕಿಕೊಳ್ಳಬಾರದಿತ್ತು, ಕೆಂಪು ಲಿಪ್​ಸ್ಟಿಕ್​ ಯಾಕೆ? ಕಣ್ಣು ಮಿಟುಕಿಸಬಾರದಿತ್ತು ಎಂದೆಲ್ಲ ಹೇಳುತ್ತಾರೆ’ ಇದನ್ನು ಒಗ್ಗಟ್ಟಾಗಿ ಖಂಡಿಸಿ ಧ್ವನಿ ಎತ್ತಬೇಕಿದೆ ಎಂದು ರಮ್ಯಾ ಪೋಸ್ಟ್​ ಮಾಡಿದ್ದಾರೆ.