ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಘಟನೆ ನಡೆದ ಬಗ್ಗೆ ವಿವರವಾಗಿ ಮಾಹಿತಿ ಬಿಚ್ಚಿಟ್ಟ ಸಂತ್ರಸ್ತೆ ಸ್ನೇಹಿತ. ಮೈಸೂರು,ಆಗಸ್ಟ್,27,2021(..):ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ವಿವರಿಸಿದ್ದಾರೆ. ಯುವಕ ಮತ್ತು ಯುವತಿ ಜಾಗಿಂಗ್​ ಗೆ ಹೋದಾಗ ಈ ದುಷ್ಕೃತ್ಯ ನಡೆದಿದೆ ಎಂದು ಹೇಳಲಾಗಿದ್ದು, ತನ್ನ ಮೇಲೂ ಹಲ್ಲೆ ನಡೆದಿರುವುದಾಗಿ ಯುವಕ ಹೇಳಿಕೊಂಡಿದ್ದಾರೆ. ಆಗಸ್ಟ್​ 24ರ ಸಂಜೆ 7.25 ರಿಂದ 7.30ರ ಸುಮಾರಿಗೆ ಜೆಎಸ್‌ಎಸ್ ಆಯುರ್ವೇದಿಕ್ ಕಾಲೇಜಿನ ಮುಂದೆ ವಾಟರ್ ಟ್ಯಾಂಕ್ ಬಳಿ ಕಚ್ಚಾ ರಸ್ತೆಯಲ್ಲಿ ನಾವಿಬ್ಬರೂ ಹೋಗಿದ್ದೆವು. ನಾನು ಯಾವಾಗಲೂ ಜಾಗಿಂಗ್‌ ಗೆ ಹೋಗುವ ಸ್ಥಳ ಅದಾಗಿತ್ತು. ಅಲ್ಲಿ ಹೋಗಿ ಬೈಕ್ ನಿಲ್ಲಿಸಿ ನನ್ನ ಸ್ನೇಹಿತೆ ಜೊತೆ ಕುಳಿತಿದ್ದೆ. ಆ ವೇಳೆ 25 ರಿಂದ‌ 30 ವರ್ಷದ ಸುಮಾರು 6 ಮಂದಿ ಬಂದರು. ಏಕಾಏಕಿ ಬಂದು ದೊಣ್ಣೆಯಿಂದ ನನ್ನ ಮೇಲೆ ಹಲ್ಲೆ ಮಾಡಿದರು. ನಂತರ ನನ್ನನ್ನು ತಳ್ಳಿ ಜೊತೆಯಲ್ಲಿದ್ದ ನನ್ನ ಸ್ನೇಹಿತೆಯನ್ನ ಪೊದೆಗಳಿರುವ ಜಾಗಕ್ಕೆ ಎಳೆದುಕೊಂಡು ಹೋದರು. ಅಲ್ಲಿದ್ದ ಗುಂಪಿನವರಲ್ಲಿ ಒಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆ ವೇಳೆ ನನಗೆ ಪ್ರಜ್ಞೆ ತಪ್ಪಿ 15 ನಿಮಿಷದ ನಂತರ ಪ್ರಜ್ಞೆ ಬಂದಿತು. ಆಗ 4 ಜನ ನನ್ನ ಮುಂದೆ ನಿಂತು ನನ್ನ ತಂದೆಗೆ ಕಾಲ್ ಮಾಡಿಸಿದರು. 3 ಲಕ್ಷ ರೂಪಾಯಿ ಹಣ ಕೊಡುವಂತೆ ಒತ್ತಾಯ ಮಾಡಿದರು. ನಾನು ಗೆಳತಿ ಎಲ್ಲಿ ಎಂದು ಕೇಳಿದಾಗ ಇಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ಅವಳಿಗೆ ತರಚಿದ ಗಾಯಗಳಾಗಿದ್ದವು. ಎಂದು ಪೊಲೀಸರಿಗೆ ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. …. : ’ , 27, 2021 (..): - ., . . .“ 24 7.25 7.30 , , . . . 25 30 . . . 15 .”“ . 3 . . . ,” .: / / ’ / : - –-’- - - – .