ಮಾಜಿ ಸಚಿವರನ್ನ ರಕ್ಷಿಸಿದಂತೆ ಮೈಸೂರಿನ ರೇಪಿಸ್ಟ್‌ ಗಳನ್ನ ರಕ್ಷಣೆ ಮಾಡುವಂತಿದೆ- ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿ ಮೈಸೂರು,ಆಗಸ್ಟ್,26,2021(..):ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ನೇಹಿತನ ಜೊತೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು ಇದರಿಂದಾಗಿ ಮೈಸೂರು ಜನತೆ ಬೆಚ್ಚಿ ಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದೆ. ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಯುವತಿ ಮೇಲೆ ಅತ್ಯಾಚಾರವೆಸಗಿದ ಮಾಜಿ ಸಚಿವರಿಗೆ ರಕ್ಷಣೆ ನೀಡುವಂತೆ ಅದೇರೀತಿ ಮೈಸೂರಿನ ರೇಪಿಸ್ಟ್‌ ಗಳನ್ನ ರಕ್ಷಣೆ ಮಾಡುವಂತಿದೆ ಅತ್ಯಾಚಾರಿ ಶಾಸಕ, ಮಾಜಿ ಸಚಿವರನ್ನು ಹೊಂದಿರುವ ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ. ಹಾಗೆಯೇ ಸಿದ್ದು ಸವದಿಯನ್ನು ರಕ್ಷಿಸಿದ ಮಹಿಳಾ ವಿರೋಧಿ ಈ ಬಿಜೆಪಿಯಿಂದ ಮಹಿಳೆಯರ ರಕ್ಷಣೆ ಬಯಸುವುದು ವ್ಯರ್ಥ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ. … . : ., 26, 2021 (..): . . , , “ . , .”, .: / / / / / : - - – -