ದೇಶದಲ್ಲಿ ಕೊರೋನ ಏರಿಳಿಕೆ: ಕಳೆದ 24 ಗಂಟೆಯಲ್ಲಿ 37,593 ಮಂದಿಗೆ ಸೋಂಕು ದೃಢ ನವದೆಹಲಿ,ಆಗಸ್ಟ್,25,2021(..):ದೇಶದಲ್ಲಿ ನಿನ್ನೆ ಕಡಿಮೆ ಪ್ರಮಾಣದಲ್ಲಿ ದೃಢವಾಗಿದ್ದ ಕೊರೋನಾ ಸೋಂಕಿನ ಪ್ರಮಾಣ ಇದೀಗ ಮತ್ತೆ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 37,593 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ 37,593 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಈ ಅವಧಿಯಲ್ಲಿ 648 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 34,169 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಭಾರತದಲ್ಲಿ ಈವೆರೆಗೆ ಒಟ್ಟು 3,25,12,366 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 4,35,758 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 3,22,327 ಸಕ್ರಿಯ ಪ್ರಕರಣಗಳಿದ್ದು, 3,17,54,281 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. …. : 37,593 , 25, 2021 (..): -19 . 37,593 24 . , 648 34,169 24 . 3,25,12,366, 4,35,758 . 3,22,327 3,17,54,281 .: -19 / / : 37,593 -- - 24