ಮೈಸೂರು ಮೇಯರ್ ಗಾದಿ ಹಿಡಿಯುವ ವಿಶ್ವಾಸದಲ್ಲಿ ಕೇಸರಿ ಪಾಳೆಯ: ಸದಸ್ಯರು, ಶಾಸಕರಿಗೆ ವಿಪ್ ಜಾರಿ. ಮೈಸೂರು,ಆಗಸ್ಟ್,25,2021(..):ಇಂದು ನಡೆಯುವ ಮೈಸೂರು ಪಾಲಿಕೆ ಮೇಯರ್ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ಈ ಮಧ್ಯೆ ಬಿಜೆಪಿ ಪಾಳಯ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ. ಬಿಜೆಪಿ ಕಚೇರಿಯಲ್ಲಿ ಇಂದು ಪಾಲಿಕೆ ಸದಸ್ಯರ ತುರ್ತು ಸಭೆ ನಡೆದಿದ್ದು, ಈ ವೇಳೆ ಪಾಲಿಕೆ ಸದಸ್ಯರು, ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಶಾಸಕ ಎಸ್.ಎ ರಾಮದಾಸ್ ಈ ಸಭೆಗೂ ಗೈರಾಗಿದ್ದರು. ಹೀಗಾಗಿ ಮೇಯರ್ ಚುನಾವಣೆಯಲ್ಲಿ ರಾಮದಾಸ್ ನಡೆ ತೀವ್ರ ಕುತೂಹಲ ಕೆರಳಿಸಿದೆ. ಪಾಲಿಕೆ‌ ಮೇಯರ್ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರಿನಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಾ.ರಾ.ಮಹೇಶ್ ಅವರಿಗೆ ಮನವಿ ಮಾಡಿದ್ದೆ. ಎರಡು ಸಲ ನಮಗೆ ತಪ್ಪಿದೆ‌‌ ಅಂತ ಕೇಳಿದ್ದೆ. ಹೈಕಮಾಂಡ್ ಜೊತೆ ಮಾತನಾಡಿ ಹೇಳುತ್ತೇನೆ ಎಂದು ಹೇಳಿದ್ದರು. ಆದ್ರೆ‌ ಈವರೆಗು ಯಾವುದೇ ಮಾಹಿತಿ‌ ಕೊಟ್ಟಿಲ್ಲ. ನಾಮಪತ್ರ ಸಲ್ಲಿಸಲು ಹೇಳಿದ್ದೆ,ಅದರಂತೆ ಸಲ್ಲಿಸಿದ್ದಾರೆ. 12 ಗಂಟೆವರೆಗೂ ಸಮಯ ಇದೆ. ನಮಗೆ ಮೇಯರ್ ಸಿಗಬೇಕು ಎಂಬ ಆಸೆ ಕಾರ್ಯಕರ್ತರಲ್ಲಿದೆ. ಕಾದು ನೋಡೋಣ ಎಂದರು. …. : , , 25, 2021 (..): , . , . .. . , . , - .. . .. “ . . . 12.00 . ’ . ,” .: / / / : - –- –- -