- ಫಲಿತಾಂಶ : ಎನ್‌ಟಿಎಗೆ ಸುಪ್ರೀಂಕೋರ್ಟ್‌ ನೋಟಿಸ್‌ . ನವ ದೆಹಲಿ, ಜೂ.11,2024: (.. ) ಈ ಸಾಲಿನ ಎನ್‌ಇಇಟಿ-ಯುಜಿ ಫಲಿತಾಂಶದ ಗೊಂದಲಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಎನ್‌ಟಿಎಗೆ ನೋಟಿಸ್ ಜಾರಿ ಮಾಡಿ, ” ಕೇಳಿ ಬಂದಿರುವ ಆರೋಪಗಳು ವ್ಯವಸ್ಥೆಯ ನಂಬಿಕೆ ಮೇಲೆ ಪರಿಣಾಮ ಬೀರಿದೆ ” , ಆದ್ದರಿಂದ ನಮಗೆ ಉತ್ತರ ಬೇಕುʼ ಎಂದು ಕಟ್ಟುನಿಟ್ಟಾಗಿ ತಿಳಿಸಿತು. ಪೀಠವು, ಕೋರ್ಟ್‌ ರಜೆಯ ನಂತರ ಜುಲೈ 8 ರಂದು ಹೆಚ್ಚಿನ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದ ಇತರೆ ಅರ್ಜಿಗಳನ್ನು ಸಹ ಮುಖ್ಯ ಅರ್ಜಿಯ ಜತೆಗೆ ಟ್ಯಾಗ್ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತು. ಈ ಅರ್ಜಿಯನ್ನು ಜೂನ್ 1 ರಂದು ಶಿವಂಗಿ ಮಿಶ್ರಾ ಮತ್ತು ಇತರರು ಫಲಿತಾಂಶ ಘೋಷಣೆಗೂ ಮುನ್ನ ಸಲ್ಲಿಸಿದ್ದರು. : , 8. , , : () ’ - . , “ ” .”