ಶೂಟಿಂಗ್ ವೇಳೆ ಗಾಯ, ಲೀಲಾವತಿ ಆಸ್ಪತ್ರೆಯಲ್ಲಿ ಅಭಿಷೇಕ್ ಬಚ್ಚನ್’ಗೆ ಚಿಕಿತ್ಸೆ ಬೆಂಗಳೂರು, ಆಗಸ್ಟ್ 24, 2021 (..):ನಟ ಅಭಿಷೇಕ್ ಬಚ್ಚನ್ ಶೂಟಿಂಗ್ ವೇಳೆ ಕೈಗೆ ಗಾಯಮಾಡಿಕೊಂಡಿದ್ದಾರೆ. ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಶೂಟಿಂಗ್ ವೇಳೆ ಕೈಗೆ ಗಾಯವಾಗಿದ್ದು, ಮುರಿತಕ್ಕೊಳಗಾಗಿದೆ ಎನ್ನಲಾಗಿದೆ. ಆಸ್ಪತ್ರೆಗೆ ಅಮಿತಾಭ್ ಬಚ್ಚನ್ ಹಾಗೂ ಸಹೋದರಿ ಶ್ವೇತಾ ಭೇಟಿ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಕಳೆದ ವಾರ ಪತ್ನಿ ಐಶ್ವರ್ಯಾ, ಪುತ್ರಿ ಆರಾಧ್ಯ ಜೊತೆಗೆ ಅಭಿಷೇಕ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಲೀಲಾವತಿ ಆಸ್ಪತ್ರೆಯಲ್ಲಿ ಅಭಿಷೇಕ್ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.