ಮೈಸೂರು ದಸರಾ ಮಹೋತ್ಸವ: ಜಂಬೂಸವಾರಿಗೆ 14 ಆನೆಗಳ ಆಯ್ಕೆ ಮಾಡಿದ ಅರಣ್ಯಾಧಿಕಾರಿಗಳು. ಮೈಸೂರು,ಆಗಸ್ಟ್,24,2021(..):ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ ಈ ಬಾರಿಯೂ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನ ಸರಳವಾಗಿ ಆಚರಿಸಲಾಗುತ್ತದೆಯೇ ಅಥವಾ ಹಿಂದಿನಂತೆಯೇ ಸಂಭ್ರಮದಿಂದ ಆಚರಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ದಸರಾ ಜಂಬೂ ಸವಾರಿಗೆ ಆನೆಗಳನ್ನ ಆಯ್ಕೆ ಮಾಡಲಾಗಿದೆ. ದಸರಾ ಆಚರಣೆ ಸಂಬಂಧ ಹೈ ಪವರ್ ಕಮಿಟಿ ಮೀಟಿಂಗ್ ಮುನ್ನ ಡಿಸಿಎಫ್ ಕರಿಕಾಳ‌ನ್ ನೇತೃತ್ವದಲ್ಲಿ ಅರಣ್ಯಧಿಕಾರಿಗಳು 14 ಆನೆಗಳನ್ನ ಆಯ್ಕೆ ಮಾಡಿದ್ದಾರೆ. ವಿವಿಧ ಕ್ಯಾಂಪ್ ಗಳಿಂದ 14 ಆನೆಗಳನ್ನ ಪಟ್ಟಿ ಮಾಡಿ ಬೆಂಗಳೂರಿನ‌ ಮುಖ್ಯ ಅರಣ್ಯ ಕಚೇರಿಗೆ ಕಳುಹಿಸಲಾಗಿದೆ. ಆನೆಕಾಡು, ದುಬಾರೆ, ಮತ್ತಿಗೋಡು,ಬಂಡೀಪುರ ಆನೆ ಶಿಬಿರದಿಂದ ಆನೆಗಳ ಆಯ್ಕೆ ಮಾಡಲಾಗಿದ್ದು, ಸದ್ಯ ವಿಕ್ರಮ್, ವಿಜಯಾ, ಅಭಿಮನ್ಯು, ಗೋಪಾಲಸ್ವಾಮಿ, ಭೀಮಾ, ಮಹೇಂದ್ರ, ಧನಂಜಯ, ಪ್ರಶಾಂತ್, ಗೋಪಿ, ಹರ್ಷ, ಕಾವೇರಿ, ಲಕ್ಷ್ಮಣ, ಚೈತ್ರಾ,ಮಹಾರಾಷ್ಟ್ರ ಭೀಮಾ.ಆನೆಗಳು ಪಟ್ಟಿಯಲ್ಲಿ ಇವೆ. ಸರಳ ದಸರಾವಾದರೆ 14 ಆನೆಗಳಲ್ಲಿ 7 ಆನೆಗಳು ನಾಡಿಗೆ ಕರೆಸಿಕೊಳ್ಳಲು ಅರಣ್ಯಾಧಿಕಾರಿಗಳು ಚಿಂತನೆ‌ ನಡೆಸಿದ್ದಾರೆ. ಕಳೆದ ವರ್ಷ ಸರಳ ದಸರಾ ಆಚರಣೆ ಹಿನ್ನೆಲೆ 5 ಆನೆಗಳನ್ನ ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತಾ ದೃಷ್ಟಿಯಿಂದ ಎರಡು ಆನೆಗಳನ್ನ ಹೆಚ್ಚುವರಿಯಾಗಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. … : 14 , 24, 2021 (..): . , - . 14 - . 14 . , , , . , , , , , , , , , , , , , . 14 . 5 . , .: / / / 14 : - -14 - – .