ಮೈಸೂರಿನ ಐಷ್‌ನಿಂದ ಶ್ರವಣದೋಷ ಪತ್ತೆ ಹಚ್ಚುವ ಉಪಯುಕ್ತ ಆ್ಯಪ್ ಬಿಡುಗಡೆ ಮೈಸೂರು, ಆಗಸ್ಟ್ ೨೩, ೨೦೨೧ (..): ಪರಿಣಮಕಾರಿ ಸಂವಹನೆಗೆ ಉತ್ತಮ ಶ್ರವಣ ಸಾಮರ್ಥ್ಯ (ಆಲಿಸುವಿಕೆ) ಬಹಳ ಮುಖ್ಯ. ಶ್ರವಣದೋಷವಿದ್ದರೆ ಸಂವಹನೆಗೆ ಅಡಚಣೆಯಾಗುತ್ತದೆ. ಜೊತೆಗೆ, ಶೈಕ್ಷಣಿಕ ಸಾಧನೆ, ಕೆಲಸದ ಸ್ಥಳದಲ್ಲಿ ಕೆಲಸದ ಸಾಧನೆ, ಭಾವನಾತ್ಮಕ ಹಾಗೂ ಮಾನಸಿಕ ಕ್ಷೇತ್ರಗಳ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ, ಶ್ರವಣದೋಷವನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಸೂಕ್ತ ಚಿಕಿತ್ಸೆ ಪಡೆದು ಗುಣಪಡಿಸುವುದು ಸುಲಭ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ಶ್ರವಣ ಸಾಮರ್ಥ್ಯದ ಕುರಿತು ಸೂಕ್ತ ತಪಾಸಣೆ ನಡೆಸಿಕೊಳ್ಳುವುದು ಸೂಕ್ತ. ಒಂದು ವೇಳೆ ಏನಾದರೂ ದೋಷಗಳಿದ್ದರೆ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಈ ರೀತಿ ಶ್ರವಣದೋಷ ತಪಾಸಣೆಗಳನ್ನು ಒದಗಿಸುವ ನಿಟ್ಟಿನಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಒಂದು ವಿನೂತನ ಆ್ಯಂಡ್ರಾಯ್ಡ್ ಆಧಾರಿತ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಮೂಲಕ ಶ್ರವಣದೋಷಗಳಿಗೆ ಸಂಬಂಧಪಟ್ಟ ತಪಾಸಣೆ ನಡೆಸಬಹುದಾಗಿದೆ. ಡಾ. ಪಿ. ಮಂಜುಳಾ, ಡಾ. ಬಿ. ಜಿತಿನ್ ರಾಜ್, ಬಿ. ನಾಗರಾಜು ಹಾಗೂ ಎಸ್. ಪ್ರಶಾಂತ್ ಅವರನ್ನು ಒಳಗೊಂಡ ತಂಡ ಈ ಸಾಧನೆಯನ್ನು ಮಾಡಿದೆ.ಯಾರಿಗಾದರೂ ತಮ್ಮ ಶ್ರವಣ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಐಷ್ ಶ್ರವಣ ತಪಾಸಣೆಯ ಆ್ಯಪ್ ಅನ್ನು ( ()) ಗೂಗಲ್ ಪ್ಲೇಸ್ಟೋರ್‌ನಿಂದ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ://..///?=.. . ಇದನ್ನು ಬಳಸಲು ಕೇವಲ ೫ ನಿಮಿಷಗಳು ಸಾಕು ಮತ್ತು ೮ ವರ್ಷ ಮೇಲ್ಪಟ್ಟವರು ಇದನ್ನು ಉಪಯೋಗಿಸಬಹುದು. ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಲಭ್ಯವಿದೆ. ಈ ಆ್ಯಪ್ ಮೂಲಕ ಶ್ರವಣಶಕ್ತಿ ತಪಾಸಣೆಗೆ ಎರಡೂ ಕಿವಿಗಳಿಗೆ ಸಂಪರ್ಕವಿರುವ ಇಯರ್‌ಫೋನ್‌ಗಳಿರುವುದು ಅಗತ್ಯ. ಈ ಎಹೆಚ್‌ಎಸ್ ಆ್ಯಪ್, ಹಿನ್ನೆಲೆ ಧ್ವನಿಯೊಂದಿಗೆ ಪದಗಳ ಗುಂಪನ್ನು ತೋರಿಸುತ್ತದೆ (ಒಂದರ ನಂತರ ಒಂದು). ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಕಿವಿಯಲ್ಲಿ ಕೇಳಿಸುವ ಪದವನ್ನು ಆ್ಯಪ್‌ನಲ್ಲಿ ಗುರುತಿಸಿ ಸರಿಯಾದ ಚಿತ್ರವನ್ನು ಆಯ್ಕೆ ಮಾಡಬೇಕು (ಒಟ್ಟು ನಾಲ್ಕು ಆಯ್ಕೆಗಳಿರುತ್ತವೆ). ಈ ಚಟುವಟಿಕೆ ಪೂರ್ಣಗೊಳಿಸಿದ ನಂತರ ‘ ‘ ಅಥವಾ ‘ ‘ (ಹತ್ತಿರದ ಶ್ರವಣ ಕೇಂದ್ರಕ್ಕೆ ಭೇಟಿ ನೀಡಿ) ಎಂಬ ಫಲಿತಾಂಶ ನೀಡುತ್ತದೆ. ಅಂದರೆ ನಿಮ್ಮಲ್ಲಿ ಏನಾದರೂ ಶ್ರವಣದೋಷ ಕಂಡು ಬಂದರೆ ಬಳಕೆದಾರರಿಗೆ ಹೆಚ್ಚಿನ ತಪಾಸಣೆಯ ಅಗತ್ಯವಿರುವುದು ಹಾಗೂ ಹತ್ತಿರದ ಶ್ರವಣ ಚಿಕಿತ್ಸಾಲಯಕ್ಕೆ ಭೇಟಿ ನೀಡುವ ಅಗತ್ಯವನ್ನು ಸೂಚಿಸುತ್ತದೆ. ಈ ಆ್ಯಪ್ ಶ್ರವಣದೋಷಗಳಿಗೆ ಸಂಬಂಧಪಟ್ಟಂತೆ ಉತ್ತಮ ತಪಾಸಣಾ ಕೇಂದ್ರದ ಸೌಲಭ್ಯಗಳು ಲಭ್ಯವಿಲ್ಲದಿರುವಂತಹ ಹಾಗೂ ಸುಲಭವಾಗಿ ತಲುಪಲು ಸಾಧ್ಯವಾಗದಿರುವಂತಹ ಜನರಿಗೆ ಅತ್ಯಂತ ಸೂಕ್ತವಾಗಿದೆ. ಜೊತೆಗೆ ತಪಾಸಣೆಗೆ ತಗಲುವ ವೆಚ್ಚಗಳನ್ನೂ ಉಳಿಸಬಹುದು. ಈ ಆ್ಯಪ್ ಬಳಸಿ ಪ್ರಾಥಮಿಕ ತಪಾಸಣೆ ಸೇವೆ ಪಡೆದುಕೊಳ್ಳಬಹುದು. ಜೊತೆಗೆ, ಈ ಆ್ಯಪ್ ಅನ್ನು ಇತರರೊಂದಿಗೆ ಶೇರ್ ಮಾಡಿಕೊಳ್ಳಲು ಒಂದು ಲಿಂಕ್ ಅನ್ನು ಸಹ ನೀಡಿದ್ದು, ಐಷ್‌ನ ಯೂಟ್ಯೂಬ್ ಹಾಗೂ ಫೇಸ್‌ಬುಕ್ ಪುಟಗಳ ಲಿಂಕ್ ಅನ್ನೂ ಹೊಂದಿದೆ. ಬಳಕೆದಾರರು ಅದನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. : - - - : . , , , . , . ( ) . , & , . . . , . , . . . () . 5 8 . - , , . . ( ), , . / ( ) . , . , , . ( / ). . . , . ://..///?=..