ಬೆಳಗಾವಿ ಸುವರ್ಣಸೌಧಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ: ವಿವಿಧ ಸಂಘಟನೆಗಳಿಂದ ಮನವಿ. ಬೆಳಗಾವಿ,ಆಗಸ್ಟ್,21,2021(,.):ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಗೆ ಆಗಮಿಸಿರುವ ಬಸವರಾಜ ಬೊಮ್ಮಾಯಿ ಇಂದು ಸುವರ್ಣಸೌಧಕ್ಕೆ ಭೇಟಿ ನೀಡಿದ್ದಾರೆ. ಸುವರ್ಣ ವಿಧಾನಸೌಧದ ಹೆಲಿಪ್ಯಾಡ್‌ಗೆ ಬಂದಿಳಿದ ಅವರನ್ನು ಪಕ್ಷದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬರಮಾಡಿಕೊಂಡರು. ಇದರೊಂದಿಗೆ ಈ ಹೆಲಿಪ್ಯಾಡ್ ಹಲವು ವರ್ಷಗಳ‌ ನಂತರ ಬಳಕೆ ಆದಂತಾಯಿತು. ಸುವರ್ಣ ಸೌಧಕ್ಕೆ ಸಿಎಂ ಬೊಮ್ಮಾಯಿ ಭೇಟಿ ನಿಡಿದ್ದು ಈ ವೇಳೆ ಕರವೇ ಮತ್ತು ರೈತಸಂಘಟನೆಗಳು ಸಿಎಂಗೆ ಮನವಿ ಸಲ್ಲಿಸಿವೆ. ಗಡಿ ಸಮಸ್ಯೆ ಕುರಿತು ಸುವರ್ಣಸೌಧದಲ್ಲಿ ಚರ್ಚಿಸಲು ಅವಕಾಶ ನೀಡುವಂತೆ ಕರವೇ ಮನವಿ ಸಲ್ಲಿಸಿತು. ಇನ್ನು ಸಂಪೂರ್ಣ ಸಾಲಮನ್ನಾ, ನೆರೆಹಾನಿ ಪರಿಹಾರವನ್ನ ನೀಡುವಂತೆ ವಿವಿಧ ರೈತಸಂಘಟನೆಗಳು ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದವು. : - - - -.