ವಿಚಾರಣೆಗೆ ಬರುವಂತೆ ಇಡಿ ಕರೆದಿಲ್ಲ- ದೆಹಲಿಗೆ ಭೇಟಿ ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ ಜಮೀರ್ ಅಹ್ಮದ್ ಖಾನ್. ನವದೆಹಲಿ,ಆಗಸ್ಟ್,21,2021(..): ಜಾರಿ ನಿರ್ದೇಶನಾಲಯ ನೋಟಿಸ್​​ ನೀಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್​ ಖಾನ್ ​ ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ದೆಹಲಿಯ ಏರ್ ಪೊರ್ಟ್ ನಲ್ಲಿ ಸ್ಪಷ್ಟನೆನೀಡಿರುವ ಶಾಸಕ ಜಮೀರ್ ಅಹ್ಮದ್ ಖಾನ್, ವಿಚಾರಣೆಗೆ ಬರುವಂತೆ ಇಡಿ ಕರೆದಿಲ್ಲ ನನ್ನನ್ನ ಕರೆದಿಲ್ಲ. ನೋಟಿಸ್ ನೀಡಿಲ್ಲ. ಇಡಿ ವಿಚಾರಣೆ ಸಂಬಂಧ ನಾನು ದೆಹಲಿಗೆ ಬಂದಿಲ್ಲ. ಇಡಿ ನೋಟಿಸ್ ನೀಡಿದ್ದರೆ ನಿಮಗೆ ತೋರಿಸುತ್ತಿದೆ ಎಂದರು ನಿನ್ನೆ ಡಿ ಕೆ ಶಿವಕುಮಾರ್ ಜೊತೆ ಶಾಸಕ ಜಮೀರ್ ಅಹಮದ್ ಚರ್ಚೆ ನಡೆಸಿದ್ದರು. ಹಿಂದಿನ ಘಟನಾವಳಿ ಬಗ್ಗೆ ಡಿಕೆಶಿಯಿಂದ ಜಮೀರ್ ಮಾಹಿತಿ ಪಡೆದರು. ಜಮೀರ್ ಗೆ ಇ.ಡಿ. ವಿಚಾರಣೆಯ ರೀತಿರಿವಾಜುಗಳ ಬಗ್ಗೆಯೂ ಡಿ ಕೆ ಶಿವಕುಮಾರ್ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ. : – - – .--