ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕನ್ನಡದ ಐಪಿಎಸ್ ಅಧಿಕಾರಿ. ಕಾಬೂಲ್,ಆಗಸ್ಟ್,21,2021(..):ಅಫ್ಘಾನಿಸ್ಥಾನ ತಾಲಿಬಾನ್ ವಶವಾಗಿದ್ದು, ಅಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಈ ಮಧ್ಯೆ ಅಫ್ಘನ್ ನಲ್ಲಿ ಸಿಲುಕಿರುವ ಭಾರತ ದೇಶದ ಜನರನ್ನ ಕೇಂದ್ರ ಸರ್ಕಾರ ಕರೆತರಲು ವ್ಯವಸ್ಥೆ ಮಾಡಿದೆ. ಈ ನಡುವೆ ಕನ್ನಡದ ಐಪಿಎಸ್ ಅಧಿಕಾರಿಯೊಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರೆ. ಕಾಬೂಲ್ ನಲ್ಲಿ ಭದ್ರತಾ ವಿಭಾಗದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸವಿತಾ ಹಂದೆ ಎಂಬುವವರು ಅತಂತ್ರರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸವಿತಾ ಹಂದೆ ಅವರು ಹೊಳೇನರಸಿಪುರ, ಬೀದರ್, ಉಡುಪಿ, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬೆಂಗಳೂರಿನಲ್ಲಿ ಆಡಳಿತ ವಿಭಾಗದ ಡಿಸಿಪಿಯಾಗಿ ಕೆಲಸ ಮಾಡಿದ್ದರು. 2000ರಲ್ಲಿ ಬಡ್ತಿ ಪಡೆದು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ. ಸವಿತಾ ಹಂದೆ ಅವರು ಈಗಿನ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಸಹದ್ಯೋಗಿಯಾಗಿದ್ದರು ಎನ್ನಲಾಗಿದೆ. … , 21, 2021 (..): . . . , , . , , , . . 2000 . , .: / / / : - - - – .