ಭಾರತ ಸೇನೆಯಿಂದ ಎನ್ ಕೌಂಟರ್ : ಮೂವರು ಉಗ್ರರು ಫಿನೀಶ್. ಶ್ರೀನಗರ,ಆಗಸ್ಟ್,21,2021(..):ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ಗೆ ಮೂವರು ಉಗ್ರರು ಫಿನೀಶ್ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಯು ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಅವಂತಿಪೋರಾದ ನಾಗಬರೇನ್ ಟ್ರಾಲ್​​ನಲ್ಲಿ ಜೈಶ್​-ಇ-ಮೊಹಮ್ಮದ್​ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಫಿನೀಶ್ ಮಾಡಿದ್ದಾರೆ. ಸ್ಥಳದಲ್ಲಿ ಇನ್ನೂ ಕಾಶ್ಮೀರದ ಪೊಲೀಸರು ಮತ್ತು ಭಾರತೀಯ ಸೇನಾಪಡೆಗಳಿಂದ ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಹತ್ಯೆಯಾದ ಮೂವರು ಉಗ್ರರು ಜೈಷ್​-ಇ-ಮೊಹಮ್ಮದ್​ ಸಂಘಟನೆಗೆ ಸೇರಿದವರಾಗಿದ್ದು, ಈ ಪೈಕಿ ಇಬ್ಬರು ಉಗ್ರರು ಜುಲೈ 23ರಂದು ಕಾಶ್ಮೀರದ ಸರ್ಕಾರಿ ಹೈಸ್ಕೂಲ್​​ ಜವಾನನ್ನು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. : – – - –-.