ಕೇಂದ್ರ ಸಚಿವರ ಸ್ವಾಗತ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಸಮರ್ಥಿಸಿಕೊಂಡ ಗೃಹ ಸಚಿವ ಅರಗ ಜ್ಞಾನೇಂದ್ರ. ಮಂಗಳೂರು,ಆಗಸ್ಟ್,20,2021(..):ಯಾದಗಿರಿ ಯರಗೊಳ ಗ್ರಾಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನ ಸ್ವಾಗತಿಸುವ ವೇಳೆ ಗುಂಡು ಹಾರಿಸಿದ ಘಟನೆಯನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಸಚಿವ ಅರಗ ಜ್ಞಾನೇಂದ್ರ, ಗುಂಡು ಹಾರಿಸುವುದು ಆ ಭಾಗದಲ್ಲಿ ವಾಡಿಕೆಯಾಗಿದೆ. ಖುಷಿಯಾಗಿದ್ದಾಗ ಮತ್ತು ದುಃಖದಲ್ಲಿದ್ಧಾಗ ಗುಂಡು ಹಾರಿಸುತ್ತಾರೆ. ಹೀಗಾಗಿ ಕೇಂದ್ರಸಚಿವರು ಬಂದಾಗ ಖುಷಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕರ್ತವ್ಯಲೋಪವೆಸಗಿದ ಪೊಲೀಸರ ವಿರುದ್ದವೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. : - - – - – .