‘ಐ ಲವ್ ತಾಲಿಬಾನ್’ ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ ವ್ಯಕ್ತಿ: ಬಂಧನಕ್ಕೆ ಆಗ್ರಹ. ಬಾಗಲಕೋಟೆ,ಆಗಸ್ಟ್,20,2021(..):ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದು ಈ ಬೆನ್ನಲ್ಲೆ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬ ‘ಐ ಲವ್ ತಾಲಿಬಾನ್’ ಎಂದು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಆಸೀಫ್ ಗಲಿಗಲಿ ಎಂಬಾತನೇ ಈ ರೀತಿ ಕಿಡಿಗೇಡಿ ಪೋಸ್ಟ್ ಹಾಕಿರುವುದು. ತಾಲಿಬಾನಿಗಳ ಹುಚ್ಚಾಟದ ವಿಡೀಯೋಗೆ ಆಸೀಫ್ ಗಲಿಗಲಿ ಎಂಬಾತ ಐ ಲವ್ ತಾಲಿಬಾನ್ ಎಂದು ಕಾಮೆಂಟ್ ಮಾಡಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ಪೋಸ್ಟ್ ಮಾಡಿರುವ ಕಿಡಿಗೇಡಿಯನ್ನ ಬಂಧಿಸುವಂತೆ ಆಗ್ರಹಿಸಿವೆ. : - - - – –