ಮತ್ತೆ ಮುನ್ನಲೆಗೆ ಬಂದ ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು : ಮನವಿ ಸಲ್ಲಿಸಿ ಒತ್ತಡ ಹೇರಲು ಇಬ್ಬರು ನಾಯಕರು ನಿರ್ಧಾರ. ಮೈಸೂರು,ಆಗಸ್ಟ್,20,2021(..):ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೆ ಹುಣಸೂರನ್ನ ಪ್ರತ್ಯೇಕ ಜಿಲ್ಲೆ ಮಾಡುವಂತೆ ಎಂಎಲ್ ಸಿ ಹೆಚ್.ವಿಶ್ವನಾಥ್ ಒತ್ತಡ ಹೇರಿದ್ದರು. ಆದಾದ ನಂತರ ಕೆಲ ದಿನಗಳ ಕಾಲ ಈ ವಿಚಾರವನ್ನ ಕೈಬಿಡಲಾಗುತ್ತು. ಇದೀಗ ಮತ್ತೆ ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು ಮುನ್ನಲೆಗೆ ಬಂದಿದೆ. ಹುಣಸೂರು ಪ್ರತ್ಯೇಕ ಜಿಲ್ಲೆಗಾಗಿ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಹಾಗೂ ಹುಣಸೂರು ಕಾಂಗ್ರೆಸ್ ಶಾಸಕ ಹೆಚ್.ಪಿ ಮಂಜುನಾಥ್ ಒಂದಾಗಿದ್ದಾರೆ. ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಗೆ ಮನವಿ ಸಲ್ಲಿಸಲು ಇಬ್ಬರು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮೈಸೂರು ಜಿಲ್ಲೆಯ ಒತ್ತಡ ಕಡಿಮೆ ಮಾಡಲು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಜಂಟಿಯಾಗಿ ಇಬ್ಬರು ನಾಯಕರು ಘೋಷಣೆ ಮಾಡಿದ್ದು ಇದೇ ವಿಚಾರವನ್ನ ಮುಂದಿನ ಅಧಿವೇಶನದಲ್ಲೂ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. …. : , 20, 2021 (..): , . . , . . . .. , . - .. . , . .: / / . / .. : - - –.- -