ಬಾಲ್ಯ ವಿವಾಹ ತಪ್ಪಿಸಿ ನನಗೆ ಶಿಕ್ಷಣ ಕೊಡಿಸಿ: ಅಧಿಕಾರಿಗಳಿಗೆ ಪತ್ರ ಬರೆದ ಬಾಲಕಿ. ಮೈಸೂರು,ಆಗಸ್ಟ್,19,2021(..):ತನಗೆ ಬಾಲ್ಯ ವಿವಾಹ ಮಾಡಲು ಮನೆಯವರು ಮುಂದಾದ ಹಿನ್ನೆಲೆ ಇದಕ್ಕೆ ವಿರೋಧಿ ವ್ಯಕ್ತಪಡಿಸಿದ ಬಾಲಕಿಯೊಬ್ಬಳು ಅಧಿಕಾರಿಗಳಿಗೆ ಪತ್ರ ಬರೆದು ಬಾಲ್ಯ ವಿವಾಹ ತಪ್ಪಿಸಿ ತನಗೆ ಶಿಕ್ಷಣ ಕೊಡಿಸಿ ಎಂದು ಮನವಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹಾಸನ‌ ಮೂಲದ ಬಾಲಕಿ ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಧಿಕಾರಿಗೆ ಪತ್ರ ಬರೆದಿದ್ದಾಳೆ. ತನಗೆ ತಂದೆ ತಾಯಿ ಇಲ್ಲದ ಕಾರಣ ಮನೆಯಲ್ಲಿ ಮದುವೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ನಾನು ಎಸ್ಎಸ್ಎಲ್ಸಿ ಉತ್ತೀರ್ಣಳಾಗಿದ್ದೇನೆ. ನನಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಅಧಿಕಾರಿಗಳಿಗೆ ಬಾಲಕಿ ಮನವಿ ಮಾಡಿದ್ದಾಳೆ. ಮನೆ ಬಿಟ್ಟು ಬಂದಿರುವ ಬಾಲಕಿ ಸದ್ಯ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದಳು. ನಂತರ ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಧಿಕಾರಿ ಸಂಪರ್ಕಿಸಿ ಬಾಲಕಿ‌ ಪತ್ರ ನೀಡಿದ್ದಾಳೆ. ಇದೀಗ ಬಾಲಕಿಗೆ ಬಾಲಮಂದಿರಲ್ಲಿ ಆಶ್ರಯ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. …. : , 19, 2021 (..): . , . , . “ . , ,” . ’ . . , .: / / / / / : -: - – – -