ಮತ್ತೆ ತೆರೆ ಮೇಲೆ ಕಿಚ್ಚ-ಶಿವಣ್ಣ ಜುಗಲ್’ಬಂದಿ! ಸುದೀಪ್ ಒನ್ ಲೈನ್ ಸ್ಟೋರಿ ಕೇಳಿ ಮೆಚ್ಚಿದ ಹ್ಯಾಟ್ರಿಕ್ ಹೀರೋ ಬೆಂಗಳೂರು, ಆಗಸ್ಟ್ 18, 2021 (..):ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ‘ನೀ ಸಿಗೋವರೆಗೂ’ ಸಿನಿಮಾಕ್ಕೆ ಶುಭ ಕೋರಲು ಬಂದಿದ್ದ ಕಿಚ್ಚ ಶಿವಣ್ಣ ಅವರಿಗೆ ಸ್ಟೋರಿಯೊಂದನ್ನು ಹೇಳಿದ್ದಾರೆ. ಇದನ್ನು ಕೇಳಿ ಥ್ರಿಲ್ ಆಗಿರುವ ಹ್ಯಾಟ್ರಿಕ್ ಹೀರೋ ಒಟ್ಟಿಗೆ ನಟಿಸಲು ಓಕೆ ಎಂದಿದ್ದಾರೆ. ಒನ್ ಲೈನ್ ಸ್ಟೋರಿ ಕೇಳಿದ ಶಿವರಾಜ್ ಕುಮಾರ್ ಮರು ಮಾತಿಲ್ಲದೇ ಒಪ್ಪಿರುವ ಜತೆಗೆ ನೀವೇ ಡೈರೆಕ್ಷನ್ ಮಾಡಿ ಎಂದು ಸುದೀಪ್ ಗೆ ಸಲಹೆ ನೀಡಿದ್ದಾರೆ. ಈ ಮೂಲಕ ಪ್ರೇಮ್ ನಿರ್ದೇಶನದ ‘ದಿ ವಿಲನ್’ನಲ್ಲಿ ನಂತರ ಸುದೀಪ್ ಮತ್ತು ಶಿವಣ್ಣ ಮತ್ತೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.