ಅಣ್ಣವ್ರ ಮೊಮ್ಮಗಳ ‘ನಿನ್ನ ಸನಿಹಕೆ’ ಬಿಡುಗಡೆ ದಿಢೀರ್ ಮುಂದೂಡಿಕೆ ಬೆಂಗಳೂರು, ಆಗಸ್ಟ್ 17, 2021 (..):ನಿನ್ನ ಸನಿಹಕೆ ಚಿತ್ರ ಬಿಡುಗಡೆ ದಿನಾಂಕವನ್ನು ದಿಡೀರ್ ಮುಂದೂಡಲಾಗಿದೆ. ಹೌದು. ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಚೊಚ್ಚಲ ಸಿನಿಮಾ ನಿನ್ನ ಸನಿಹಕೆ ಬಿಡುಗಡೆ ದಿನಾಂಕವನ್ನು ಇದ್ದಕ್ಕಿದಂತೆ ಮುಂದೂಡಲಾಗಿದೆ. ಆಗಸ್ಟ್ 20 ರಂದು ಚಿತ್ರವನ್ನು ರಿಲೀಸ್ ಮಾಡುವುದಾಗಿ ಚಿತ್ರ ತಂಡ ಘೋಷಣೆಯಾಗಿತ್ತು. ಆದರೆ ಕೊರೋನಾ ಹಾವಳಿಯಿಂದಾಗಿ ಇನ್ನೂ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಸರ್ಕಾರ ಅನುಮತಿ ನೀಡಿಲ್ಲ.ಹೀಗಾಗಿ ದಿಢೀರ್ ಬಿಡುಗಡೆ ದಿನಾಂಕ ಮುಂದೂಡಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಧನ್ಯಾ ಜತೆ ಸೂರಜ್ ಗೌಡ ನಟಿಸಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ.