ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ಧ ಆರೋಗ್ಯಾಧಿಕಾರಿ. ಬೆಂಗಳೂರು,ಆಗಸ್ಟ್,16,2021(..):15 ಸಾವಿರ ರೂ . ಲಂಚ ಸ್ವೀಕರಿಸುವ ವೇಳೆ ಬಿಬಿಎಂಪಿ ಆರೋಗ್ಯಾಧಿಕಾರಿ ರೆಡ್ ಹ್ಯಾಂಡ್ ಆಗಿ ಎಸಿಬಿಗೆ ಬಲೆಗೆ ಬಿದ್ದಿದ್ದಾರೆ. ಕಾಟನ್ ಪೇಟೆ ಬಿಬಿಎಂಪಿ ಕಚೇರಿಯ ಆರೋಗ್ಯಾಧಿಕಾರಿ ಕೃಷ್ಣ ಅವರೇ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವುದು. ನೀರಿನ ಟ್ಯಾಂಕರ್ ಟೆಂಡರ್ ಗೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೃಷ್ಣ ಅವರು ಕಚೇರಿಯಲ್ಲಿ 15 ಸಾವಿರ ರೂ. ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. : - –- --