ವೃತ್ತಿ ಜೀವನದಲ್ಲಿ ಬ್ರೇಕ್ ನೀಡಿದ ಸಿನಿಮಾ ಫೋಟೋ ಹಂಚಿಕೊಂಡ ರಶ್ಮಿಕಾ ಬೆಂಗಳೂರು, ಆಗಸ್ಟ್ 16, 2021 (..):ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಗೀತಾ ಗೋವಿಂದಂ ಸಿನಿಮಾ ಬಿಡುಗಡೆ ಇಂದಿಗೆ ಮೂರು ವರ್ಷವಾಗಿದೆ. ಈ ಕುರಿತ ಫೋಟೋವೊಂದನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಅಂದಹಾಗೆ ರಶ್ಮಿಕಾಗೆ ಬ್ರೇಕ್ ನೀಡಿದ್ದು ಗೀತಾ ಗೋವಿಂದಂ. ಈ ಸಿನಿಮಾದಿಂದಲೇ ಕೊಡಗಿನ ಬೆಡಗಿ ಬಾಲಿವುಡ್ ಮಟ್ಟಕ್ಕೂ ಬೆಳೆಯಲು ಸಾಧ್ಯವಾಗಿತ್ತು. ವಿಜಯ್ ದೇವರಕೊಂಡ ಜೊತೆಗಿನ ಫೋಟೋ ಹಂಚಿಕೊಂಡಿರುವ ರಶ್ಮಿಕಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.