ಸಿಎಂ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ಬಳಕೆ ನಿಷೇಧ. ಬೆಂಗಳೂರು,ಆಗಸ್ಟ್,16,2021(..):ಸಿಎಂ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ಸಿಬ್ಬಂದಿಗಳು ಸಿಎಂ ಖಾಸಗಿ ನಿವಾಸ ಆರ್ ಟಿ ನಗರ ಮನೆಯ ಹೊರಭಾಗದಲ್ಲಿ ಅಧಿಕೃತವಾಗಿ ಬೋರ್ಡ್ ಹಾಕಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಲೆಂದು ಬರುವವರು ಸಿಎಂ ಜೊತೆ ಫೋಟೋ, ವಿಡಿಯೋಗೆ ಮುಂದಾಗುತ್ತಾರೆ. ಇದರಿಂದ ಸಿಎಂ ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ ಈ ಹಿನ್ನೆಲೆಯಲ್ಲಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ. … , 16, 2021 (..): . ’ . ’ .. , . . , , .: / / / .. : –- – - -