ಕೇರಳ ವಿದ್ಯಾರ್ಥಿನಿಯರಿಂದ ಹೊಸ ಆವಿಷ್ಕಾರ ‘ ಟ್ಯಾಬ್ಲೆಟ್ ‘ ಫಿಲ್ಟರ್ ಕಾಫಿ ! ಕೇರಳ ಆಗಸ್ಟ್, ೧೪, ೨೦೨೧: (.. ) ಕೇರಳದ ಎರ್ನಾಕುಲಂನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ೧೨ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿರುವಾಗ ಫಿಲ್ಟರ್ ಕಾಫಿಯನ್ನು ತಯಾರಿಸುವ ವಿಶೇಷ ಗುಳಿಗೆ ಒಂದನ್ನು ಆವಿಷ್ಕರಿಸಿದ್ದಾರೆ! ಹೌದು. ಈ ಪ್ರಯಾಣಸ್ನೇಹಿ ಸಾವಯವ ಕಾಫಿ ಗುಳಿಗೆಯನ್ನು (ಕ್ಯಾಪ್ಸೂಲ್) ‘ಕಾಫಿ ಫಿಲೆ’ ಎಂದು ಹೆಸರಿಸಿದ್ದಾರೆ. ಮರಗೆಣಸಿನ ಲೇಪನವಿರುವ ಪ್ರತಿಯೊಂದು ಗುಳಿಗೆಯೊಳಗೆ ಫಿಲ್ಟರ್ ಕಾಫಿಯನ್ನು ಸಂಕುಚಿತಗೊಳಿಸಿ ತುಂಬಲಾಗಿದೆ. ಈ ಹೊದಿಕೆ ಗುಳಿಗೆಯೊಳಗಿರುವ ಕಾಫಿ ಕೆಡೆದಿರುವಂತೆ ರಕ್ಷಿಸುತ್ತದೆ ಹಾಗೂ ಸುಲಭವಾಗಿ ಶೇಖರಿಸಿಡಲು ನಿರ್ದಿಷ್ಟವಾದ ಆಕಾರವನ್ನು ಒದಗಿಸಿದೆ. ಈ ಗುಳಿಗೆಗಳನ್ನು ಶೇಖರಿಸಿಡುವುದು ಹಾಗೂ ಬಳಸುವುದು ಬಹಳ ಸುಲಭ. ನೀವು ಮಾಡಬೇಕಾಗಿರುವುದಿಷ್ಟೆ. ಗುಳಿಗೆಯನ್ನು ಒಂದು ಲೋಟ ಹಾಲು ಅಥವಾ ನೀರಿನಲ್ಲಿ ಹಾಕಿದರಾಯ್ತು. ಕೆಲವೇ ಸೆಕೆಂಡುಗಳಲ್ಲಿ ಆ ಗುಳಿಗೆ ಕರಗಿಹೋಗುತ್ತದೆ. ಈ ಗುಳಿಗೆಯನ್ನು ಸುಲಭವಾಗಿ ನಿಮ್ಮ ಪರ್ಸ್ನೊಳಗೆ ಇಟ್ಟುಕೊಳ್ಳಬಹುದಾಗಿದ್ದು, ಮೂರು ತಿಂಗಳ ಕಾಲ ತಾಜಾ ಆಗಿರುತ್ತದೆ. ಅದ್ಭುತ ಅಲ್ಲವೇ?!ಈ ಆವಿಷ್ಕಾರದಲ್ಲಿ ಯಶಸ್ವಿಯಾಗಿರುವ ವಿದ್ಯಾರ್ಥಿನಿಯರಾದ ಸೌಂದರ್ಯ ಲಕ್ಷ್ಮೀ , ಎಲಿಶಾ ಏನೊರಿ ಕಡುತೋಸ್, ಡಿಂಪಲ್ ಹಾಗೂ ಶಿವನಂದನಾ ಅವರಿಗೆ ಅಭಿನಂದನೆಗಳು. ಚಿತ್ರ ಮಾಹಿತಿ ಕೃಪೆ : ಇಂಟರ್ ನೆಟ್ : / / / / / ‘ - ‘ : ’ , --. - . . . . ’ . , .