ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್. ಮೈಸೂರು,ಆಗಸ್ಟ್,13,2021(..):ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ, ಗೌರವ ಸಲ್ಲಿಸಿದರು. ಸರಸ್ವತಿಪುರಂನಲ್ಲಿರುವ ಬಿ.ಎಸ್. ರಾಮಚಂದ್ರರಾವ್, ಸೋಮಶೇಖರಯ್ಯ, ಸಿದ್ಧಾರ್ಥನಗರದಲ್ಲಿರುವ ಬಿ.ಲಿಂಗಯ್ಯ, ಟಿ.ಪುಟ್ಟಣ್ಣ ಅವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಶಲ-ಕ್ಷೇಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಬರುತ್ತಿರುವ ಬಗ್ಗೆ ಡಿಸಿ ಬಗಾದಿ ಗೌತಮ್ ವಿಚಾರಿಸಿದರು. ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆಯು ಡಿಸಿ ಬಗಾದಿ ಗೌತಮ್ ಮಾಹಿತಿ ಪಡೆದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು, ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. : – - - - – .