ಇಂಗ್ಲೆಂಡ್ ವಿರುದ್ಧ ಟೆಸ್ಟ್: 2ನೇ ದಿನ ಇಲ್ಲ ಮಳೆ ಆತಂಕ ಬೆಂಗಳೂರು, ಆಗಸ್ಟ್ 13, 2021 (..):ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ವಿರಾಟ್ ಕೊಹ್ಲಿ ( ) ಪಡೆ 3 ವಿಕೆಟ್ ನಷ್ಟಕ್ಕೆ 276 ರನ್ ಕಲೆಹಾಕಿದೆ. ಎರಡನೇ ದಿನ ಕೂಡ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವ ಸಾಧ್ಯತೆ ಕಡಿಮೆ. ಲಂಡನ್​ನಲ್ಲಿ ಎರಡನೇ ದಿನ ಮಳೆ ಆಗುವ ಸಾಧ್ಯತೆ ಇಲ್ಲ. ಅಲ್ಲದೆ ಮೂರನೇ ದಿನ ಕೂಡ ಸಂಪೂರ್ಣ 90 ಓವರ್​ಗಳ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಮೊದಲ ನಾಲ್ಕು ದಿನಗಳ ವರೆಗೆ ಶೇ. 20ಕ್ಕಿಂತ ಅಧಿಕ ತಾಪಮಾನ ಇರಲಿದೆಯಂತೆ. ಇಂಗ್ಲೆಂಡ್ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. 11 ಗಂಟೆಯಿಂದ 2 ಗಂಟೆ ವರೆಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಮಳೆ ಸಾಧ್ಯತೆ ಕಡಿಮೆ.