ಬಾಕ್ಸಿಂಗ್ ನಲ್ಲಿ ಕಂಚು ಗೆದ್ದ ಲೊವ್ಲಿನಾ ಈಗ ಪೊಲೀಸ್ ಆಫೀಸರ್! ಬೆಂಗಳೂರು, ಆಗಸ್ಟ್ 13, 2021 (..):ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಬಾಕ್ಸರ್ ಲೊವ್ಲಿನಾ ಬರ್ಗೊಹೆ ಈಗ ಪೊಲೀಸ್ ಅಧಿಕಾರಿ! ಹೌದು, ಲೊವ್ಲಿನಾ ಬರ್ಗೊಹೆ ಅವರಿಗೆ ಅಸ್ಸಾಂ ಸರ್ಕಾರ ಸೂಕ್ತ ಗೌರವ ನೀಡಿದೆ. ಪೊಲೀಸ್ ಇಲಾಖೆಯಲ್ಲಿ ಡಿಎಸ್ ಪಿ ಹುದ್ದೆ ನೀಡಿ ಗೌರವಿಸಲಾಗಿದೆ. ಕಂಚಿನ ಪದಕ ಗೆದ್ದಿದ್ದ ಬಾಕ್ಸರ್ ಲೊವ್ಲಿನಾರನ್ನು ಡಿಎಸ್ ಪಿ ಆಗಿ ನೇಮಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ಆದೇಶ ಹೊರಡಿಸಿದ್ದಾರೆ. ಲೊವ್ಲಿನಾ ಹೆಸರಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸ್ಪೋರ್ಟಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು ಎಂದು ಬಿಸ್ವ ಶರ್ಮಾ ಹೇಳಿದ್ದಾರೆ.