ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ: ಶನಿವಾರ, ಭಾನುವಾರ ಬೆಂಗಳೂರಿನಲ್ಲಿ ದೇಗುಲಗಳು ಬಂದ್. ಬೆಂಗಳೂರು,ಆಗಸ್ಟ್,12,2021(..):ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಶುರುವಾಗಿದ್ದು ಈಗಾಗಲೇ ಗಡಿಭಾಗದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ ಶ್ರಾವಣ ಮಾಸದ ವಾರಾಂತ್ಯದ ದಿನಗಳು ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕರು ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಜನರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಈ ಆದೇಶ ಹೊರಡಿಸಿದ್ದಾರೆ. ಶ್ರಾವಣಮಾಸದ ವೀಕೆಂಡ್ ಪೂಜೆಗೆ ಬ್ರೇಕ್ ಹಾಕಲಾಗಿದೆ. ಶನಿವಾರ, ಭಾನುವಾರ ದೇಗುಲಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ದೇವರ ದರ್ಶನ, ವಿಶೇಷ ಪೂಜೆ, ಹೋಮ, ಹವನಗಳಿಗೆ ಬ್ರೇಕ್ ಹಾಕಲಾಗಿದ್ದು ದಿನನಿತ್ಯ ಪೂಜೆ ಎಂದಿನಂತೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಜನರು ಗುಂಪುಗೂಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜನರು ದೇಗುಲಗಳಿಗೆ ತೆರಳುವುದನ್ನು ಸಾಧ್ಯವಾದಷ್ಟೂಕಡಿಮೆ ಮಾಡಬೇಕು. ಕೊರೋನಾ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ. … -19 3rd : , 12, 2021 (..): -19 3rd . . , . . . . . , .“ -19 , . , . ,” , .: / / / / / -19 / 3rd / : - 3rd - - - -