ಬಿಜೆಪಿ ಶಾಸಕನ ಮನೆ ಮುಂದೆ ನಿಲ್ಲಿಸಿದ್ಧ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ. ಬೆಂಗಳೂರು, ಆಗಸ್ಟ್ 12,2021(..):ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಮುಂದೆ ನಿಲ್ಲಿಸಿದ್ದ 2 ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬೊಮ್ಮನಹಳ್ಳಿಯಲ್ಲಿರುವ ಸತೀಶ್ ರೆಡ್ಡಿ ಮನೆ ಮುಂಭಾಗದಲ್ಲಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು 2 ಕಾರುಗಳು ಸುಟ್ಟು ಕರಕಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಫಾರ್ಚೂನರ್ ಸೇರಿ ಎರಡು ಕಾರುಗಳೂ ಸುಟ್ಟು ಕರಕಲಾಗಿವೆ. ಬೆಂಕಿ ಹಚ್ಚಿದವರು ಯಾರು ಎನ್ನುವ ಬಗ್ಗೆ ಇಲ್ಲಿಯ ತನಕ ಸುಳಿವು ಸಿಕ್ಕಿಲ್ಲ. ರಾಜಕೀಯ ದ್ವೇಷಕ್ಕಾಗಿ ಬೆಂಕಿ ಹಚ್ಚಲಾಗಿದೆಯಾ? ವೈಯಕ್ತಿಕ ಕಾರಣಗಳೇನಾದರೂ ಇವೆಯಾ? ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಘಟನೆಯ ನಂತರ ಪೊಲೀಸರಿಗೆ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮಾತನಾಡಿರುವ ಶಾಸಕ ಸತೀಶ್ ರೆಡ್ಡಿ, ನನಗೆ ರಾಜಕೀಯ ವೈರಿಗಳಿಲ್ಲ. ರಾಜಕೀಯ ದ್ವೇಷಕ್ಕಾಗಿ ನಡೆದಿದೆಯಾ ಅನ್ನೋದು ಗೊತ್ತಿ.ಲ್ಲ. ಈ ಘಟನೆಯನ್ನ ರಾಜಕೀಯವಾಗಿ ತೆಗೆದುಕೊಳ್ಳಲ್ಲ. ಎರಡು ಕಾರುಗಳು ಶೇ. 80ರಷ್ಟು ಸುಟ್ಟು ಹೋಗಿವೆ. ಏನೇ ಇದ್ದರೂ ಡೈರಕ್ಟ್ ಆಗಿ ಬಂದು ಮಾಡಲಿ. ಹೀಗೆ ಇಲಿಗಳಂತೆ ಹಿಂದೆ ಬಂದು ಬೆಂಕಿ ಹಚ್ಚೋದಲ್ಲ ಎಂದು ಕಿಡಿಕಾರಿದರು. …. , 12, 2021 (..): . , , . , . . . , . , “ --, ,” .: / / / : - - – – - -