2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್’ನಲ್ಲಿ ಕ್ರಿಕೆಟ್ ಸೇರ್ಪಡೆ ?! ಬೆಂಗಳೂರು, ಆಗಸ್ಟ್ 11, 2021 (..):ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕೂಡ ಸೇರ್ಪಡೆಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಐಸಿಸಿ ಕೂಡ ಇದಕ್ಕಾಗಿ ಪ್ರಯತ್ನ ಮುಂದುವರಿಸಿದ್ದು, ಇಂಥದೊಂದು ಸಾಧ್ಯತೆ ದಟ್ಟವಾಗಿದೆ. ಹೌದು. ಒಲಿಂಪಿಕ್ಸ್‌ಗೆ ಕ್ರಿಕೆಟನ್ನೂ ಸೇರ್ಪಡೆಗೊಳಿಸಲು ಐಸಿಸಿಯ ಪ್ರಯತ್ನ ಹೆಚ್ಚು ಬಿರುಸು ಪಡೆದಿದೆ. ಇದು ಯಶಸ್ವಿಯಾದದ್ದೇ ಆದಲ್ಲಿ 128 ವರ್ಷಗಳಷ್ಟು ಸುದೀರ್ಘ‌ ಅವಧಿಯ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕೂಡ ಸೇರ್ಪಡೆಯಾಗಲಿದೆ. 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಹಾಗೂ ಏಕೈಕ ಸಲ ಕ್ರಿಕೆಟ್‌ ಸ್ಪರ್ಧೆ ನಡೆದಿತ್ತು.