ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ: ಅವಾಚ್ಯ ಶಬ್ದ ಬಳಸಿದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ. ಬೆಳಗಾವಿ,ಆಗಸ್ಟ್,11,2021(..):ಕಾಂಗ್ರೆಸ್ ನಾಯಕರ ವಿರುದ್ಧ ತಾವು ಅವಾಚ್ಯ ಶಬ್ದ ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ಆ ಪದ ಬಳಸಲಿಲ್ಲ. ಆ ಪದ ಬಳಸಿದ್ದು ಬಿಕೆ ಹರಿಪ್ರಸಾದ್ ಗೆ. ಬಳಿಕ ಆ ಬಗ್ಗೆ ಕ್ಷಮೆಯನ್ನೂ ಕೇಳಿದ್ದೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ನನಗೂ ಹರಿಪ್ರಸಾದ್ ಗೂ ವೈಯಕ್ತಿಕ ದ್ವೇಷವಿಲ್ಲ. ಾದರೆ ಅವರು ನನ್ನನ್ನ ಜೋಕರ್ ಎಂದರು. ನರೇಂದ್ರ ಮೋದಿ ಹೆಸರು ಸುಲಭ ಶೌಚಾಲಯಕ್ಕೆ ಹೆಸರಿಡಿ ಅಂತಾ ಹೇಳಿದ್ರು. ಹೀಗಾಗಿ ನನಗೆ ಸಿಟ್ಟು ಬಂತು. ಸಿಟ್ಟಿನ ಭರದಲ್ಲಿ ಆ ಹೇಳಿಕೆ ನೀಡಿದೆ. ಸಿಟ್ಟಿನ ಭರದಲ್ಲಿ ಆ ಮಾತು ಮಾತನಾಡಿ ತಕ್ಷಣವೇ ಆ ಪದ ವಾಪಸ್ ಪಡೆದೆ ಎಂದು ಹೇಳಿದರು. ಇದೇ ವೇಳೆ ಸಿದ್ಧರಾಮಯ್ಯ ವಿರುದ್ದ ಕಿಡಿಕಾರಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯಗೆ ಕೆಟ್ಟ ಕನಸು ಬೀಳುತ್ತಿದೆ. ಅವರು ಒಳ್ಳೆಯ ಆಡಳಿತ ಕೊಟ್ಟಿದ್ರೆ ಅಧಿಕಾರಕ್ಕೆ ಬರುತ್ತಿದ್ದರು. ಈಗ ಅಧಿಕಾರ ಇಲ್ಲದೇ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇನ್ನು ಸಚಿವ ಸ್ಥಾನಕ್ಕೆ ಆನಂದ್ ರಾಜೀನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆ ವೇಳೆ ಕೆಲವರಿಗೆ ಅಸಮಾಧಾನ ಸಹಜ. ಆನಂದ್ ಸಿಂಗ್ ಜತೆ ಸಿಎಂ, ಹಿರಿಯರು ಚರ್ಚಿಸುತ್ತಾರೆ. ಆನಂದ್ ಸಿಂಗ್ರನ್ನು ಸಮಾಧಾನ ಮಾಡುವ ವಿಶ್ವಾಸವಿದೆ ಎಂದು ಹೇಳಿದರು. … : .. , 11, 2021 (..): .. .“ ’ . .. . ,” . , ’ . , ’ , . , , , , .: .. / / .. / : - - – –