ಹಿರಿಯರು ಗೌರವ ಕೊಟ್ಟು ಗೌರವ ತೆಗೆದುಕೊಳ್ಳಲಿ- ಸಚಿವ ವಿ.ಸೋಮಣ್ಣಗೆ ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು. ಬೆಂಗಳೂರು,ಆಗಸ್ಟ್,10,2021(..):ನಾನು ಮೊದಲ ಬಾರಿ ಸಚಿವನಾಗಿದ್ದ ವೇಳೆ ಪ್ರೀತಂ ಗೌಡ ಹುಟ್ಟಿರಲಿಲ್ಲ. ಪ್ರೀತಂಗೌಡ ಒಮ್ಮೆ ಶಾಸಕರಾದ ಮೇಲೆ ಅವರು ದೇವರಲ್ಲ. ಅವರು ಇತಿಮಿತಿಯಲ್ಲಿ ಇರಲಿ ಎಂದು ಸಲಹೆ ನೀಡಿದ್ಧ ಸಚಿವ ವಿ.ಸೋಮಣ್ಣಗೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ. ಮಾತನಾಡಬೇಕಾದರೆ ಗೌರವ ಕೊಟ್ಟು, ಗೌರವ ಪಡೆಯಲಿ. ಅವರು ಹಿರಿಯರಾದರೆ ಮಾರ್ಗದರ್ಶನ ಮಾಡಲಿ ಎಂದು ಶಾಸಕ ಪ್ರೀತಂ ಗೌಡ ಸಚಿವ ವಿ. ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಶಾಸಕ ಪ್ರೀತಂಗೌಡ, ನಾನು ರಾಜಕಾರಣ ಮಾಡಲು ಬಂದಿದ್ದೇನೆ. ಕಬ್ಬನ್ ಪಾರ್ಕ್ , ಲಾಲ್ ಬಾಗ್ ನೋಡಲು ಅಲ್ಲ. ಹಿರಿಯರು ಏನೇ ಇದ್ದರೂ ನನಗೆ ಫೋನ್ ಮಾಡಿ ಹೇಳುತ್ತಾರೆ ಎಂದರು. ನಾನು ಒಂದು ಸಾರಿ ಗೆದ್ದರೇನೆ, ಐದು ಬಾರಿ ಗೆದ್ದವರಿಗೂ ಒಂದೇ ವೋಟು. ಮೊದಲು ಗೆದ್ದವರಿಗೂ ಒಂದೇ ವೋಟು. ಆರು ಬಾರಿ ಗೆದ್ದವರಿಗೂ ಒಂದೇ ವೋಟು. ಯಾರೇ ಆದರೂ ಊಟಕ್ಕೆ ಹೋಗಲಿ. ಅದು ಬಿಟ್ಟು ಬೇರೇ ಕಾರಣಕ್ಕೆ ‌ಹೋಗುವುದು ಸರಿಯೇ. ಸಿಎಂ ಆಗಿ 24ಗಂಟೆಯೊಳಗೆ ಹೋಗಿದ್ದು ಸರಿಯೇ. ಇದನ್ನ ನಮ್ಮ ಕಾರ್ಯಕರ್ತರು ಕೇಳ್ತಿದ್ದಾರೆ. ಇದು ಕಾರ್ಯಕರ್ತರು ಕೇಳಿದ್ದು ನಾನಲ್ಲ ಶಾಸಕ ಪ್ರೀತಂ ಗೌಡ ಮತ್ತೆ ಅಸಮಾಧಾನ ವ್ಯಕ್ತಪಡಿಸಿದರು. : - –--