ಕೊರೊನಾ ಮೀಟರ್: ಭಾರತದಲ್ಲಿ 28,204 ಹೊಸ ಸೋಂಕಿತರು, ಇಲ್ಲಿದೆ ಕೊಂಚ ನೆಮ್ಮದಿಯ ಸುದ್ದಿ ಬೆಂಗಳೂರು, ಆಗಸ್ಟ್ 10, 2021 (..):ಭಾರತದಲ್ಲಿ 28,204 ಹೊಸ ಕರೋನವೈರಸ್ ಪ್ರಕರಣಗಳು ದಾಖಲು ದಾಖಲಾಗಿವೆ. ಇದು ಸೋಮವಾರಕ್ಕಿಂತ ಶೇ. 20ರಷ್ಟು ಕಡಿಮೆ ಸೊಂಕಿತರು ಪತ್ತೆಯಾಗಿದ್ದಾರೆ ಎಂಬುದು ಕೊಂಚ ನೆಮ್ಮದಿಯ ವಿಷಯವಾಗಿದೆ. 9 ನೇ ಆಗಸ್ಟ್ ವರೆಗೆ ಒಟ್ಟು 48,32,78,545 ಮಾದರಿಗಳನ್ನು ಪರೀಕ್ಷಿಸಲಾಗಿದೆ, ಅದರಲ್ಲಿ 15,11,313 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ. ಈ ನಡುವೆ 52.56 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ. ಕರ್ನಾಟಕದಲ್ಲಿ 1,186 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 24 ಸಾವುಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 29,19,711 ಕ್ಕೆ ಮತ್ತು ಸಾವುಗಳು 36,817 ಕ್ಕೆ ತಲುಪಿದೆ.