ಸರ್ಕಾರಿ ಕಾರ್ಯಕ್ರಮಗಳಲ್ಲಿ ‌ನಿರೂಪಕರ ಬದಲಾವಣೆಗೆ ಒತ್ತಾಯ: ಸಿಎಂ ಮನೆ ಮುಂದೆ ಪ್ರತಿಭಟನೆಗೆ ಕುಳಿತ ಮಹಿಳೆ. ಬೆಂಗಳೂರು,ಆಗಸ್ಟ್,8,2021(..):ಸರ್ಕಾರಿ ಕಾರ್ಯಕ್ರಮಗಳಲ್ಲಿ ‌ನಿರೂಪಕರು ಹಾಗೂ ಗಾಯಕರ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಿಎಂ ಮನೆ ಮುಂದೆ ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕ್ರಮ ನಿರೂಪಕಿ ಗಿರೀಜಾ ಅವರು ಸಿಎಂ ಮನೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಳೆ ನಿರೂಪಕರು ಹಾಗೂ ಗಾಯಕರಿಗೆ ಮಣೆ ಹಾಕುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಕೇವಲ ಇಬ್ಬರೇ ನಿರೂಪಕರು. ಹೀಗಾಗಿ ನಿರೂಪಕರು ಹಾಗೂ ಗಾಯಕರ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ನೇರವಾಗಿ ಶಂಕರ್ ಪ್ರಕಾಶ್, ಹಾಗೂ ಅಪರ್ಣಾ ವಿರುದ್ದ ಅಸಮಾಧಾನ ಹೊರ ಹಾಕಿದ ನಿರೂಪಕಿ ಗಿರೀಜಾ, ಹತ್ತು ವರ್ಷದಿಂದ ಅವರೇ ನಿರೂಪಕರಾಗಿದ್ದಾರೆ. ಸರ್ಕಾರ ಬದಲಾಗುತ್ತೆ, ಸಚಿವರು ಬದಲಾಗ್ತಾರೆ ಆದ್ರೆ ಸರ್ಕಾರಿ ಕಾರ್ಯಕ್ರಮದ ನಿರೂಪಕರು ಬದಲಾಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಪ್ರತಿಭಟನೆಗೆ ಕುಳಿತಿದ್ದ ಗಿರಿಜಾರನ್ನ ಪೊಲೀಸರು ಮನವೊಲಿಸಿ ಕರೆದೊಯ್ದರು. …. ’ . , 8, 2021 (..): ’ . . “ . . , ,” . , 10 . “ , , ’ ,” . , .: / / / ’ / : – –- –-