ಸಿಎಂ ಜತೆ ಮಾತನಾಡುವೆ: ಖಾತೆ ಬದಲಾಗದಿದ್ರೆ ಮುಂದಿನ ನಿರ್ಧಾರ- ಸಚಿವ ಎಂಟಿಬಿ ನಾಗರಾಜ್. ಬೆಂಗಳೂರು,ಆಗಸ್ಟ್,8,2021(..):ಸಿಎಂ ಬಸರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೆ ಸಚಿವ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ತಮಗೆ ಸಿಕ್ಕಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ಎಂಟಿಬಿ ನಾಗರಾಜ್, ಖಾತೆ ಹಂಚಿಕೆ ಸಂಬಂಧ ಅಸಮಾಧಾನ ಇದೆ ಎಂದಿದ್ದೇನೆ. ಈ ಕುರಿತು ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗುವೆ. ಸಿಎಂ ಭೇಟಿ ಮಾಡಿ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ನೋಡಿಕೊಂಡು ಮುಂದೆ ತೀರ್ಮಾನ ಮಾಡ್ತೇನೆ. ಸಿಎಂ ಭೇಟಿಯಾದ ಬಳಿಕ ಮಾತನಾಡುತ್ತೇನೆ. ಖಾತೆ ಬದಲಾಗದಿದ್ದರೇ ನಮ್ಮ ಮುಂದಿನ ನಿರ್ಧಾರವನ್ನ ತಿಳಿಸುತ್ತೇನೆ ಎಂಧು ತಿಳಿಸಿದ್ದಾರೆ. ಹೀಗಾಗಲೇ ಸಚಿವ ಆನಂದ್ ಸಿಂಗ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿ ತೆರಳಿದ್ದಾರೆ. : – - - - - .