: ಪ್ರಾಧ್ಯಾಪಕ ದಂಪತಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ ಮೈಸೂರು ವಿವಿ ಮೈಸೂರು, ಆ.07, 2021 : (.. ) : ಪಿಹೆಚ್.ಡಿ. ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧಾರಿಸಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ದಂಪತಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಾಯನ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಟಿ.ರಾಮಚಂದ್ರಪ್ಪ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅವರಿಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಕುಲಸಚಿವ ಪ್ರೊ.ಶಿವಪ್ಪ ಅವರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ನೋಟೀಟ್ ನ ಒಟ್ಟಾರೆ ವಿವರ ಹೀಗಿದೆ… ಡಾ.ಎನ್.ಕೆ.ಲೋಲಾಕ್ಷಿ : ಮೈಸೂರು ಆದ ನೀವು, ನಿಮ್ಮ ಪತಿ ಡಾ. ಜಿ.ಟಿ.ರಾಮಚಂದ್ರಪ್ಪ, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು ಇವರು ಪಿಹೆಚ್.ಡಿ. ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆಂದು ಆರೋಪಿಸಿ ದಿನಾಂಕ 6-8-2021ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಮತ್ತು ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಷಯವು ವಿಶ್ವವಿದ್ಯಾನಿಲಯದ ಗಮನಕ್ಕೆ ಬಂದಿರುತ್ತದೆ. ನೀವು ಮತ್ತು ನಿಮ್ಮ ಪತಿ ಇಬ್ಬರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರುಗಳಾಗಿದ್ದು, ನೀವು ಪ್ರಕರಣವನ್ನು ಸರಿಯಾಗಿ ಪರಾಮರ್ಶಿಸದೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಮತ್ತು ಹೇಳಿಕೆ ನೀಡುವ ಮುನ್ನ ವಿಶ್ವವಿದ್ಯಾನಿಲಯದ ಪೂರ್ವಾನುಮತಿ ಪಡೆಯದೇ ಇರುವುದು ವಿಶ್ವವಿದ್ಯಾನಿಲಯದ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ನಿಮ್ಮ ಈ ರೀತಿಯ ಹೇಳಿಕೆಗಳಿಂದ ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವಕ್ಕೆ ಧಕ್ಕೆಯುಂಟಾಗಿರುತ್ತದೆ. ಈ ನಡವಳಿಕೆಯು ಮೇಲ್ನೋಟಕ್ಕೆ ಅಶಿಸ್ತಿನಿಂದ ಕೂಡಿರುವಂತದ್ದಾಗಿದೆ. ಈ ಸಂಬಂಧ ಸಿಸಿಎ ಅಧಿನಿಯಮದನ್ವಯ ನಿಮ್ಮ ಮೇಲೆ ಏಕೆ ಶಿಸ್ತುಕ್ರಮ ಜರುಗಿಸಬಾರದು ಎಂಬುದರ ಬಗ್ಗೆ ಲಿಖಿತ ಹೇಳಿಕೆಯನ್ನು ಈ ನೋಟೀಸ್ ತಲುಪಿದ 03 ದಿನಗಳ ಒಳಗಾಗಿ ನೀಡಬೇಕೆಂದು ನಿರ್ದೇಶಿಸಲಾಗಿದೆ. ಇಲ್ಲವಾದಲ್ಲಿ ಈ ವಿಷಯದ ಸಂಬಂಧ ನೀವು ಹೇಳುವುದು ಇಲ್ಲವೆಂದು ಪರಿಗಣಿಸಿ, ಕ್ರಮಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ. ಸಿಸಿಎ ಅಧಿನಿಯಮಗಳನ್ವಯ ಮುಂದಿನ ಕ್ರಮ ಜರುಗಿಸಲಾಗುವುದು. ಡಾ.ಜಿ.ಟಿ.ರಾಮಚಂದ್ರಪ್ಪ : ದಿನಾಂಕ 6-8-2021ರ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯಮಾಧ್ಯಮಗಳಲ್ಲಿ ನೀವು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತೀರಿ ಎಂದು ಪ್ರಕಟವಾಗಿರುವ ವಿಷಯವು ವಿಶ್ವವಿದ್ಯಾನಿಲಯದ ಗಮನಕ್ಕೆ ಬಂದಿರುತ್ತದೆ. ಈ ವಿಷಯವು ಬಹಳ ಗಂಭೀರ ಮತ್ತು ಸೂಕ್ಷ್ಮವಾಗಿದ್ದು, ಇದರಿಂದ ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದಾಗಿರುತ್ತದೆ. ಆದ್ದರಿಂದ ತಾವು ವಿಶ್ವವಿದ್ಯಾನಿಲಯದ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಲಿಖಿತ ಹೇಳಿಕೆಯನ್ನು ಈ ನೋಟೀಸ್ ತಲುಪಿದ 03 ದಿನಗಳ ಒಳಗಾಗಿ ನೀಡಬೇಕೆಂದು ಈ ಮೂಲಕ ಸೂಚಿಸಲಾಗಿದೆ. ಇಲ್ಲವಾದಲ್ಲಿ ಈ ವಿಷಯದ ಸಂಬಂಧ ನೀವು ಹೇಳುವುದು ಏನು ಇಲ್ಲವೆಂದು ಪರಿಗಣಿಸಿ, ಸಿಸಿಎ ಅಧಿನಿಯಮಗಳನ್ವಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ ಎಂದು ಕುಲಸಚಿವರು ನೋಟಿಸ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. : ---------- , 7, 2021 (..): , .. . . . , -, , . , , . .. , , . .. , , . :. .. : , .. . .. , , , 6, 2021. . , . . . , 3 , , . . .. : , .. . , . 3 , . : / -/ / / / /