ಹೊಸ ಸಚಿವರಿಗೆ ಬಂಪರ್: ಇಲ್ಲಿದೆ ನೂತನ ಸಚಿವರ ಖಾತೆ ಹಂಚಿಕೆ ವಿವರ ಬೆಂಗಳೂರು, ಆಗಸ್ಟ್ 07, 2021 (..):ಯಡಿಯೂರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದ ಅನೇಕರಿಗೆ ಬೊಮ್ಮಾಯಿ ಸರಕಾರದಲ್ಲಿಯೂ ಅದೇ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.ಸಂಪುಟದಲ್ಲಿ ಸ್ಥಾನ ಪಡೆದಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು, ಡಿಪಿಎಆರ್, ಗೃಹ ಖಾತೆಯ ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಪಟ್ಟಿ ಹೀಗಿದೆ: ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ಆರ್.ಅಶೋಕ್ – ಕಂದಾಯಬಿ.ಶ್ರೀರಾಮುಲು – ಸಾರಿಗೆ, ಪರಿಶಿಷ್ಠ ಪಂಗಡ ಅಭಿವೃದ್ದಿವಿ.ಸೋಮಣ್ಣ – ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ದಿಬಿ.ಸಿ.ಪಾಟೀಲ್ – ಕೃಷಿಎಸ್.ಟಿ.ಸೋಮಶೇಖರ್ – ಸಹಕಾರಡಾ. ಕೆ.ಸುಧಾಕರ್ – ಆರೋಗ್ಯ, ವೈದ್ಯಕೀಯ ಶಿಕ್ಷಣಕೆ.ಗೋಪಾಲಯ್ಯ – ಅಬಕಾರಿಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ಎಂಟಿಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವಿ.ಸುನಿಲ್​ಕುಮಾರ್ – ಇಂಧನಉಮೇಶ್ ಕತ್ತಿ – ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜುಜೆ.ಸಿ. ಮಾಧುಸ್ವಾಮಿ – ಸಣ್ಣ ನೀರಾವರಿಆರಗ ಜ್ಞಾನೇಂದ್ರ – ಗೃಹಖಾತೆಡಾ.ಸಿ.ಎನ್.ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮಪ್ರಭು ಚೌಹಾಣ್ – ಪಶುಸಂಗೋಪಣೆಮುರುಗೇಶ್ ನಿರಾಣಿ – ಬೃಹತ್, ಮಧ್ಯಮ ಕೈಗಾರಿಕೆಶಿವರಾಮ್ ಹೆಬ್ಬಾರ್ – ಕಾರ್ಮಿಕಎಸ್.ಅಂಗಾರ – ಮೀನುಗಾರಿಕೆ, ಬಂದರುಗೋವಿಂದ ಕಾರಜೋಳ – ಜಲಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣಕೆ.ಸಿ.ನಾರಾಯಣಗೌಡ – ಕ್ರೀಡೆಮುನಿರತ್ನ – ತೋಟಗಾರಿಕೆಭೈರತಿ ಬಸವರಾಜ್ – ನಗರಾಭಿವೃದ್ಧಿಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನಸಿ.ಸಿ.ಪಾಟೀಲ್ – ಲೋಕೋಪಯೋಗಿ