ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ ಬೆಂಗಳೂರು, ಆಗಸ್ಟ್ 07, 2021 (..):ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿಯ ಜೆಇಇ ಸೆಷನ್​​ 3 ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್ ....​ನಲ್ಲಿ ವೀಕ್ಷಿಸಬಹುದಾಗಿದೆ. ಜೆಇಇ ಮುಖ್ಯ ಪರೀಕ್ಷೆಯ ಕೀ ಆನ್ಸರ್​ನ್ನು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ...inನಲ್ಲಿ ಕೀಲಿ ಉತ್ತರವನ್ನು ನೋಡಬಹುದು ಹಾಗೂ ಡೌನ್​ಲೋಡ್​ ಮಾಡಬಹುದಾಗಿದೆ. ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವು ... ನಲ್ಲಿ ಲಭ್ಯವಿದೆ. ಇಲ್ಲಿ ನೀವು 2021 ನ್ನು ಆಯ್ಕೆ ಮಾಡಬೇಕು. ಇದಾದ ಬಳಿಕ ನಿಮ್ಮ ಅರ್ಜಿ ಸಂಖ್ಯೆ ಹಾಗೂ ಕೇಳಲಾಗುವ ಮಾಹಿತಿಯನ್ನು ಒದಗಿಸಬೇಕು. ಇದಾದ ಬಳಿಕ ನಿಮ್ಮ ಜೆಇಇ ಫಲಿತಾಂಶವು ಪರದೆ ಮೇಲೆ ಕಾಣಿಸಲಿದೆ. ಜೆಇಇಫಲಿತಾಂಶವನ್ನುನೋಡುವವಿಧಾನ: ಹಂತ 1 : ಅಧಿಕೃತ ವೆಬ್​ಸೈಟ್​ – ... ಗೆ ಭೇಟಿ ನೀಡಿ ಹಂತ 2 : 2021 ಮೇಲೆ ಕ್ಲಿಕ್​ ಮಾಡಿ. ಹಂತ 3: ನಿಮ್ಮ ಅರ್ಜಿ ಸಂಖ್ಯೆ ಹಾಗೂ ಕೇಳಲಾಗುವ ವಿವರಗಳನ್ನು ಒದಗಿಸಿ. ಹಂತ 4: ಪರದೆಯ ಮೇಲೆ ಜೆಇಇ ಫಲಿತಾಂಶ ಗೋಚರವಾಗಲಿದೆ. ಹಂತ 5: ನಿಮ್ಮ ಫಲಿತಾಂಶವನ್ನು ಡೌನ್​ಲೋಡ್​ ಮಾಡಿಕೊಳ್ಳಿ.