ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ. ನವದೆಹಲಿ,ಆಗಸ್ಟ್,6,2021(..):ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನ ಇನ್ನು ಮುಂದೆ ಮೇಜರ್​ ಧ್ಯಾನ್ ಚಂದ್​ ಖೇಲ್ ​ರತ್ನ ಪ್ರಶಸ್ತಿಯಾಗಿ ಕೊಡಲ್ಪಡುತ್ತದೆ. ಖೇಲ್ ರತ್ನ ಪ್ರಶಸ್ತಿಗೆ, ಭಾರತೀಯ ಹಾಕಿ ದಿಗ್ಗಜ ಮೇಜರ್​ ಧ್ಯಾನ್​ ಚಂದ್ ಹೆಸರಿಡುವಂತೆ ದೇಶದ ಜನರು ಮನವಿ ಮಾಡಿದ್ದರು. ದೇಶದ ಜನರ ಮನವಿಯನ್ನ ಪುರಸ್ಕರಿಸಿ ಖೇಲ್​ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್​ ಹೆಸರಿಡಲಾಗುವುದು. ಇನ್ನು ಮುಂದೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಎಂಬ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. … , 6, 2021 (..): . .: - - - : - - -