ಕೊನೆಯ ಆಷಾಢ ಶುಕ್ರವಾರ: ಭಕ್ತರಿಲ್ಲದೇ ಭಣಗುಟ್ಟಿದ ಮೈಸೂರಿನ ಚಾಮುಂಡಿ ಬೆಟ್ಟ. ಮೈಸೂರು,ಆಗಸ್ಟ್,6,2021(..):ಪ್ರತಿ ವರ್ಷ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತರ ದಂಡು ಲಗ್ಗೆ ಇಟ್ಟು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆಯಲು ನಾ ಮುಂದು ತಾ ಮುಂದು ಎಂದು ತೆರಳುತ್ತಿದ್ದರು. ಆದರೆ ಈ ಬಾರಿ ಕೊರೋನಾ ಮಹಾಮಾರಿಯಿಂದ ಈ ಸಂಭ್ರಮ ಸಡಗರಕ್ಕೆ ಬ್ರೇಕ್ ಬಿದ್ದಿದೆ. ಹೌದು, ಇಂದು ಈ ವರ್ಷದ ಕೊನೆಯ ಆಷಾಡ ಶುಕ್ರವಾರವಾಗಿದ್ದು, ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಇಂದು ಸಹ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಮೈಸೂರಿನ ಚಾಮುಂಡಿ ಬೆಟ್ಟ ಭಕ್ತರಿಲ್ಲದೇ ಭಣಗುಡುತ್ತಿದೆ. ಚಾಮುಂಡಿ ಬೆಟ್ಟದ ಮೇಲ್ಬಾಗಕ್ಕೆ ತೆರಳಲು ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳು ಬಂದ್ ಮಾಡಲಾಗಿದ್ದು, ಚಾಮುಂಡಿ ಬೆಟ್ಟದ ನಿವಾಸಿಗಳು ಹಾಗೂ ಶಿಷ್ಟಾಚಾರದ ಪ್ರಕಾರ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಕೊರೊನಾ ನಿರ್ಬಂಧ, ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಅಂಗಡಿಮುಗ್ಗಟ್ಟುಗಳು ಬಂದ್ ಮಾಡಲಾಗಿದೆ. ದೇಗುಲದ ಬಾಗಿಲು ಮುಚ್ಚಿದ್ದರಿಂದ ಸ್ಥಳೀಯ ನಿವಾಸಿಗಳು ದೇಗುಲದ ಮುಂಭಾಗದಲ್ಲೆ ಪೂಜೆ ಸಲ್ಲಿಸಿದ್ದಾರೆ. ಇಂದು ಕೊನೆಯ ಆಷಾಢ ಶುಕ್ರವಾರವಾಗಿದ್ದರಿಂದ ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಕೆ ಮಾಡಲಾಗಿದ್ದು, ಶ್ರೀ ಚಾಮುಂಡೇಶ್ವರಿ ಅಮ್ಮನವರಿಗಿಂದು ರುದ್ರಾಭಿಷೇಕ, ಕುಂಕುಮಾಭಿಷೇಕ ಮಾಡಲಾಗಿದೆ. ದೇಗುಲಕ್ಕೆ, ದೇವಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಪುನಸ್ಕಾರಗಳು ನೆರವೇರಿತು. … , 6, 2021 (..): , , . 3rd , . , . . . , , , .: / / / / : –- - –