ಟೋಕಿಯೋ ಒಲಂಪಿಕ್ಸ್: ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಸೋಲು. ಟೋಕಿಯೊ,ಆಗಸ್ಟ್,6,2021(..):ಟೋಕಿಯೋ ಒಲಂಪಿಕ್ಸ್ ನಲ್ಲಿ ಬ್ರಿಟನ್ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡ ಸೋಲನುಭವಿಸುವ ಮೂಲಕ ಕಂಚಿನ ಪದಕದಿಂದ ವಂಚಿತವಾಯಿತು. ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕೆ ತೀವ್ರ ಪೈಪೋಟಿ ನಡೆಸಿದ ಭಾರತದ ಮಹಿಳಾ ತಂಡ ಕೊನೆಗೆ 4-3 ಗೋಲುಗಳ ಅಂತರ ಸೋಲನ್ನಪ್ಪಿದೆ. ಈ ಮೂಲಕ ಭಾರತ ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ 1 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡದ ಶ್ರಮಕ್ಕೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ತಂಡದ ಸಾಧನೆ ಹೆಮ್ಮೆ ತಂದಿದೆ. ನಮ್ಮ ಮಹಿಳಾ ಹಾಕಿ ತಂಡದ ಸಾಧನೆಯನ್ನು ನಾವು ಎಂದೆಂದಿಗೂ ನೆನಪಿನಲ್ಲಿ ಇಡುತ್ತೇವೆ. ಸ್ವಲ್ಪದರಲ್ಲಿ ನಮಗೆ ಕಂಚಿನ ಪದಕ ಕೈತಪ್ಪಿ ಹೋಗಿದೆ. ಆದರೆ ಈ ತಂಡದ ಪರಿಶ್ರಮ, ಸಾಧನೆ ನವ ಭಾರತದ ಉತ್ಸಾಹವನ್ನು ಪ್ರತಿಫಲಿಸುತ್ತದೆ ಎಂದಿದ್ದಾರೆ. …. : ’ , 6, 2021 (..): ’ ., ’ , 4-3 . . ’ . “ . , . ,” .: ’ / / / : -- -