ಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ಧ ಕುಸ್ತಿಪಟು ರವಿ ಕುಮಾರ್ ದಹಿಯಾ. ಟೋಕಿಯೋ,ಆಗಸ್ಟ್,5,2021(..): ಜಪಾನ್ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಕುಸ್ತಿಪಟು ರವಿಕುಮಾರ್​ ದಹಿಯಾ ಪುರುಷರ ಕುಸ್ತಿ ವಿಭಾಗದಲ್ಲಿ ಬೆಳ್ಳಿಪದಕಕ್ಕೆ ಮುತ್ತಿಕ್ಕಿದ್ದಾರೆ. ಫೈನಲ್​ ಪಂದ್ಯದಲ್ಲಿ ರಷ್ಯಾದ ಝುವರ್​​​ ಉಗ್ವೆವಿರುದ್ಧ ಸೋಲು ಕಂಡಿದ್ದು, ಕುಸ್ತಿಪಟು ರವಿಕುಮಾರ್​ ದಹಿಯಾ ಈ ಮೂಲಕ ಬೆಳ್ಳಿ ಪದಕಕ್ಕೆ ಅರ್ಹರಾಗಿದ್ದಾರೆ. 57 ಕೆಜಿ ವಿಭಾಗದಲ್ಲಿ 2ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ರವಿಕುಮಾರ್​ ದಹಿಯಾ ಸೋಲು ಅನುಭವಿಸಿದ್ಧಾರೆ. ಫೈನಲ್​ನಲ್ಲಿ ಸೋಲು ಕಂಡರೂ ಬೆಳ್ಳಿ ಪದಕದೊಂದಿಗೆ ಭಾರತಕ್ಕೆ ಮರಳಲಿದ್ದಾರೆ. ಭಾರತಕ್ಕೆ ಒಟ್ಟು 5 ಪದಕಗಳು ಬಂದಂತಾಗಿದೆ. : - - -